ಹೊಸ ನೋಟುಗಳು ಬಂದು ಇನ್ನೂ 10 ದಿನ ಕೂಡ ಆಗಿಲ್ಲ. ಅದೆಷ್ಟೇ ಜನರು ಹೊಸ ನೋಟುಗಳ ಹೇಗಿವೆ ಎಂದೇ ನೋಡಿಲ್ಲ. ಅದಾಗಲೇ ಚೀನಾ 2000 ರೂ., 500 ರೂ. ನೋಟಿನ ಚಿತ್ರವಿರುವ ಪರ್ಸ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ.

ಥಾಯ್ಲೆಂಡ್(ನ.19): ಹೊಸ ನೋಟುಗಳು ಬಂದು ಇನ್ನೂ 10 ದಿನ ಕೂಡ ಆಗಿಲ್ಲ. ಅದೆಷ್ಟೇ ಜನರು ಹೊಸ ನೋಟುಗಳ ಹೇಗಿವೆ ಎಂದೇ ನೋಡಿಲ್ಲ. ಅದಾಗಲೇ ಚೀನಾ 2000 ರೂ., 500 ರೂ. ನೋಟಿನ ಚಿತ್ರವಿರುವ ಪರ್ಸ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ.

ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಹೊಸ 500 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದೆ. ಇದನ್ನೇ ಬಂಡಾವಳವಾಗಿಸಿಕೊಂಡ ಚೀನಾ ಉದ್ಯಮ, ಹೊಸ ನೋಟುಗಳ ಭಾವಚಿತ್ರವನ್ನು ಮಾರುಕಟ್ಟೆಗೆ ತಂದಿದ್ದು, ಇದರ ಮೂಲಕವೂ ಲಾಭ ಮಾಡಿಕೊಳ್ಳಲು ಮುಂದಾಗಿದೆ