ಒಂಟಿ ಮುಸ್ಲಿಮ್ ಮಹಿಳೆಯು ಇನ್ಮುಂದೆ ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ತಮ್ಮ ಸರ್ಕಾರದ ಸಾಧನೆಯೆಂಬಂತೆ ಪ್ರಧಾನಿ ಮೋದಿ 'ಮನ್ ಕೀ ಬಾತ್'ನಲ್ಲಿ ಬಿಂಬಿಸಿರುವುದನ್ನು ಎಐಎಮ್ಐಎಮ್ ಮುಖಂಡ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.
ನವದೆಹಲಿ: ಒಂಟಿ ಮುಸ್ಲಿಮ್ ಮಹಿಳೆಯು ಇನ್ಮುಂದೆ ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ತಮ್ಮ ಸರ್ಕಾರದ ಸಾಧನೆಯೆಂಬಂತೆ ಪ್ರಧಾನಿ ಮೋದಿ 'ಮನ್ ಕೀ ಬಾತ್'ನಲ್ಲಿ ಬಿಂಬಿಸಿರುವುದನ್ನು ಎಐಎಮ್ಐಎಮ್ ಮುಖಂಡ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.
ಮುಸ್ಲಿಮರ ಪವಿತ್ರ ಧಾರ್ಮಿಕ ಯಾತ್ರೆಯಾದ ಹಜ್ ಯಾತ್ರೆಗೆ 45 ವರ್ಷ ಮೇಲ್ಪಟ್ಟ ಮಹಿಳೆಯರು ತೆರಳುವುದಾದರೆ, ಜೊತೆಗೆ ಪುರುಷ ಪೋಷಕರು ಇರಲೇಬೇಕು ಎಂಬ ನಿಯಮವನ್ನು ಸಡಿಸಲಿಸಿರುವುದು ಸೌದಿ ಸರ್ಕಾರ. ಆದರೆ, ವಿದೇಶಿ ಸರ್ಕಾರ ಮಾಡಿರುವ ಕೆಲಸದ ಶ್ರೇಯಸ್ಸನ್ನು ಮೋದಿ ಪಡೆಯುವುದು ಸರಿಯಲ್ಲ, ಎಂದು ಒವೈಸಿ ಹೇಳಿದ್ದಾರೆ.
ಈ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ಇಲಾಖೆಯು ಈಗಾಗಲೇ ಆದೇಶ ಹೊರಡಿಸಿದೆ. ಹಜ್ ಯಾತ್ರೆಗೆ ಒಂಟಿಯಾಗಿ ತೆರಳಲು ಅವಕಾಶ ಕೊಡಬೇಕೆಂದು ಕೋರಿ ನೂರಾರು ಮುಸಲ್ಮಾನ ಮಹಿಳೆಯರು ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿ ಹಜ್ ಯಾತ್ರೆಯ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಿ 45 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು ಗಂಡಸರ ನೆರವಿಲ್ಲದೇ ಒಬ್ಬರೇ ಹೋಗಬಹುದು ಎಂದು ಅಲ್ಪಸಂಖ್ಯಾತ ಸಚಿವಾಲಯ ತಿಳಿಸಿದೆ.
ಇದರ ಬಗ್ಗೆ ಪ್ರಧಾನಿ ಮೋದಿ ಮನ್ ಕಿ ಬಾತ್'ನಲ್ಲಿ ಮಾತನಾಡುತ್ತಾ, ಹಜ್ ಯಾತ್ರೆಯ ನಿರ್ಬಂಧವನ್ನು ಸರ್ಕಾರ ತೆಗೆದು ಹಾಕಿದ್ದು ಸಣ್ಣ ವಿಷಯವೇ ಇರಬಹುದು. ಆದರೆ ಇದು ಸಮಾಜದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂದಿದ್ದಾರೆ. ಇಂತದ್ದೊಂದು ನಿರ್ಬಂಧವನ್ನು ಮೊದಲ ಬಾರಿ ಕೇಳಿದಾಗ, ಯಾರು ಇಂತಹ ನಿಯಮವನ್ನು ಮಾಡಿರಬಹುದು ಎಂದು ನನಗೆ ಆಶ್ಚರ್ಯವಾಗಿತ್ತು ಎಂದರು.
