ಖಾಸಗಿ ಬ್ಯಾಂಕುಗಳು ಯಾವ ರೀತಿ ಹಣ ಕಡಿತಗೊಳಿಸಲಿವೆ ಇಲ್ಲಿದೆ ಮಾಹಿತಿ
ಮುಂಬೈ(ಮಾ.08): ಇತ್ತೀಚಿಗಷ್ಟೆ ಕೆಲ ಖಾಸಗಿ ಬ್ಯಾಂಕ್'ಗಳು ಕನಿಷ್ಠ ಹಣ ಠೇವಣಿಯಿಡದಿದ್ದಲ್ಲಿ 500 ರೂ. ಕಡಿತ ಮಾಡುವುದಾಗಿ ಸುತ್ತೋಲೆ ಹೊರಡಿಸಿದ್ದವು. ಸರ್ಕಾರಿ ಸ್ವಾಮ್ಯದ ಎಸ್'ಬಿಐ ಕೂಡ ಏಪ್ರಿಲ್ 1ರಿಂದ ನಿಗದಿತ ಠೇವಣಿ ಇಲ್ಲದಿದ್ದಲ್ಲಿ 100 ರೂ. ಕಡಿತಗೊಳಿಸುವುದಾಗಿ ಈಗಾಗಲೇ ಪ್ರಕಟಣೆ ತಿಳಿಸಿದೆ. ಆದರೆ ಹೆಚ್'ಡಿಎಫ್'ಸಿ ಬ್ಯಾಂಕ್'ನಲ್ಲಿ 500ರೂ.ಗಿಂತ ಹೆಚ್ಚು ಹಣ ಕಡಿತಗೊಳ್ಳಲಿದೆ.
ಖಾಸಗಿ ಬ್ಯಾಂಕುಗಳು ಯಾವ ರೀತಿ ಹಣ ಕಡಿತಗೊಳಿಸಲಿವೆ ಇಲ್ಲಿದೆ ಮಾಹಿತಿ
ಹೆಚ್'ಡಿಎಫ್'ಸಿ ಬ್ಯಾಂಕ್'
1) ಉಳಿತಾಯ ಖಾತೆದಾರರು 0 ರೂನಿಂದ 2500 ರೂ. ಠೇವಣಿಯಿಟ್ಟಿದ್ದರೆ ಕನಿಷ್ಠ 600 ಹಾಗೂ ಅದಕ್ಕಿಂತ ಹೆಚ್ಚು ಹಣ ಕಡಿತವಾಗುತ್ತದೆ. ಹೆಚ್ಚುವರಿ ಹಣದಲ್ಲಿ ಶೇ.14 ಸೇವಾ ತೆರಿಗೆ,0.5 ಕೃಷಿ ಕಲ್ಯಾಣ ಸೆಸ್ ಹಾಗೂ ಶೇ.0.5 ಸ್ವಚ್ಛ ಭಾರತ ಸೆಸ್ ಒಳಗೊಳ್ಳುತ್ತದೆ.
2) 2,500 ರಿಂದ 5000 ರೂ ಠೇವಣಿಯಿದ್ದರೆ 450 ರೂ. ಕಡಿತ ಹಾಗೂ ತೆರಿಗೆ ಹಾಗೂ ಸೆಸ್ ಕಡಿತಗೊಳ್ಳುತ್ತದೆ.
3) 5,000 ರೂ.ನಿಂದ 7,500 ಠೇವಣಿಯಿದ್ದರೆ 300 ರೂ. ಕಡಿತಗೊಳುತ್ತದೆ. 7,500ರಿಂದ 10,000 ರೂ ಹಣವಿದ್ದರೆ 150 ರೂ. ಕಡಿತಗೊಳ್ಳುತ್ತದೆ.
4) ಗ್ರಾಮೀಣ ಪ್ರದೇಶದ ಉಳಿತಾಯ ಖಾತೆದಾರರಿಗೆ ತುಸು ರಿಯಾಯಿತಿ ಸಿಗಲಿದೆ. ಈ ಖಾತೆದಾರರಿಗೆ ಕನಿಷ್ಠ ಠೇವಣಿ ಹಣದ ವಾಯಿದೆಯನ್ನು 3 ತಿಂಗಳಿಗೆ ನಿಗದಿಪಡಿಸಲಾಗಿದೆ. ಮೂರು ತಿಂಗಳಲ್ಲಿ 1,000 ರೂ.ನಿಂದ 2,500 ಇದ್ದರೆ 270 ರೂ. ಕಡಿತಗೊಳ್ಳುತ್ತದೆ. 1000 ರೂ.ಗಳಿಗಿಂತ ಕಡಿಮೆಯಿದ್ದರೆ 400 ರೂ. ಕಡಿತಗೊಳ್ಳುತ್ತದೆ.
ಐಸಿಐಸಿಐ ಬ್ಯಾಂಕ್ : ನಿಗದಿತ ಠೇವಣಿ ಹಣವಿಲ್ಲದಿದ್ದಲ್ಲಿ 450 ರೂ. ಕಡಿತವಾಗುತ್ತದೆ.
ಆಕ್ಸಿಸ್ ಬ್ಯಾಂಕ್: ನಿಗದಿತ ಠೇವಣಿ ಹಣವಿಲ್ಲದಿದ್ದಲ್ಲಿ 350 ರೂ. ಕಡಿತವಾಗುತ್ತದೆ.
