ಕರ್ನಾಟಕ ಬಂದ್’ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ; ಪ್ರತಾಪ್ ಸಿಂಹ ಸೇರಿದಂತೆ ಮೂವರು ವಶಕ್ಕೆ

Not good response in Mysuru for Karnataka Band
Highlights

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ತಡೆಯಲು ಪ್ರಯತ್ನಿಸಿದ ಮೈಸೂರಿನಲ್ಲಿ ಮೂವರು ಬಿಜೆಪಿ ಜನಪ್ರತಿನಿಧಿಗಳನ್ನು ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ. 
 

ಮೈಸೂರು (ಮೇ. 28): ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ತಡೆಯಲು ಪ್ರಯತ್ನಿಸಿದ ಮೈಸೂರಿನಲ್ಲಿ ಮೂವರು ಬಿಜೆಪಿ ಜನಪ್ರತಿನಿಧಿಗಳನ್ನು ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ. 

ನಗರ ಬಸ್‌ ನಿಲ್ದಾಣದಲ್ಲಿ ಶಾಸಕ ರಾಮದಾಸ್,  ಕೇಂದ್ರ ಬಸ್‌‌ ನಿಲ್ದಾಣದಲ್ಲಿ ಶಾಸಕ ಎಲ್.ನಾಗೇಂದ್ರ ಹಾಗೂ  ಬಸ್ ಡಿಪೋ ಬಳಿ ಸಂಸದ ಪ್ರತಾಪ್‌ ಸಿಂಹರನ್ನು  ವಶಕ್ಕೆ‌ ಪಡೆಯಲಾಗಿದೆ.  ಉಳಿದಂತೆ  ಮೈಸೂರು ಜಿಲ್ಲೆಯ ಜನಜೀವನ ಎಂದಿನಂತಿದೆ.  ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಜನಜೀವನ ಸಹಜ ಸ್ಥಿತಿಯಲ್ಲಿದೆ.  ಮೈಸೂರಿನಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ರೈತರು ಈಗಾಗಲೇ ನೊಂದು ಸಾಕಾಗಿ ಹೋಗಿದೆ. ಹಾಗಾಗಿ ಅವರ ಬದಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಇದನ್ನ ಹತ್ತಿಕ್ಕುವ ಕೆಲಸ ಪೊಲೀಸರು ಮಾಡ್ತಿದ್ದಾರೆ. ಆದರೆ ನಾವು ಕಲ್ಲು ಹೊಡೆದಿಲ್ಲ, ಟೈರ್‌ಗಳಿಗೆ ಬೆಂಕಿಯೂ ಹಚ್ಚಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ರಾಮದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕುಮಾರಸ್ವಾಮಿ ಸಾಲಮನ್ನಾ ಮಾಡುತ್ತೇವೆಂದು ರೈತರಿಗೆ ಮೋಸ ಮಾಡಿದ್ದಾರೆ. ಅವರೇ ಮಾಡಲಿ ಅಥವಾ ನಮ್ಮ ಸರ್ಕಾರ ಬಂದ ಕೂಡಲೇ ಮಾಡ್ತೀವಿ. ಒಟ್ಟಾರೆ ರೈತರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ ಎಂದು ಎಸ್.ಎ.ರಾಮದಾಸ್ ಹೇಳಿದ್ದಾರೆ.  

loader