ಭೋಪಾಲದಲ್ಲಿ ನಡೆದ ಆರ್‌'ಎಸ್'ಎಸ್‌'ನ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳದ ಮುಕ್ತಾಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ(ಅ.15): ರಾಷ್ಟ್ರ ರಾಜಧಾನಿ ವಲಯದಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ಎಲ್ಲ ಪಟಾಕಿಗಳು ಮಾಲಿನ್ಯ ತರುವುದಿಲ್ಲ. ದೀಪಾವಳಿ ಸಂದರ್ಭದಲ್ಲಿ ದೀಪ ಬೆಳಗುವುದಕ್ಕೂ ನಾಳೆ ಯಾರೋ ಆಕ್ಷೇಪ ತೆಗೆಯಬಹುದು ಎಂದು ಹೇಳಿದ್ದಾರೆ.

ಭೋಪಾಲದಲ್ಲಿ ನಡೆದ ಆರ್‌'ಎಸ್'ಎಸ್‌'ನ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳದ ಮುಕ್ತಾಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಜಾತಿ ಆದಾರಿತ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಶೋಷಿತರ ಮೇಲೆತ್ತಲು ಸಹಾಯಕವಾದ ಮೀಸಲಾತಿಯ ಬಗ್ಗೆ ಬಾಬಾ ಸಾಹೇ ಅಂಬೇಡ್ಕರ್ ಹೊಂದಿದ್ದ ನಿಲುವುಗಳನ್ನು ಒಪ್ಪುವುದಾಗಿ ಹೇಳಿದ್ದಾರೆ. ಸಮಾಜಕ್ಕೆ ಎಲ್ಲಿಯವರೆಗೆ ಮೀಸಲಾತಿ ಅಗತ್ಯವಿರುತ್ತದೋ ಅಲ್ಲಿಯವರೆಗೆ ನೀಡಬೇಕು ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.