ವಿಶ್ವಸಂಸ್ಥೆಯ ಭದ್ರತಾ ಸಮಿತಿ ತನ್ನ ಮೇಲೆ ಕಠಿಣ ನಿರ್ಬಂಧ ಹೇರಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉತ್ತರ ಕೊರಿಯಾ, ಅಣ್ವಸ್ತ್ರ ದಾಳಿಯ ಮೂಲಕ ಜಪಾನ್ ದೇಶವನ್ನು ಮುಳುಗಿಸುವ, ಅಮೆರಿಕವನ್ನು ಬೂದಿ ಮಾಡುವ ಬೆದರಿಕೆ ಹಾಕಿದೆ.

ಸೋಲ್(ಸೆ.15): ವಿಶ್ವಸಂಸ್ಥೆಯ ಭದ್ರತಾ ಸಮಿತಿ ತನ್ನ ಮೇಲೆ ಕಠಿಣ ನಿರ್ಬಂಧ ಹೇರಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉತ್ತರ ಕೊರಿಯಾ, ಅಣ್ವಸ್ತ್ರ ದಾಳಿಯ ಮೂಲಕ ಜಪಾನ್ ದೇಶವನ್ನು ಮುಳುಗಿಸುವ, ಅಮೆರಿಕವನ್ನು ಬೂದಿ ಮಾಡುವ ಬೆದರಿಕೆ ಹಾಕಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ದುಷ್ಟಶಕ್ತಿಗಳ ಒಂದು ಅಸ್ತ್ರವಾಗಿದೆ. ಜೊತೆಗೆ ಅಮೆರಿಕ ಅಣತಿಯಂತೆ ಕೆಲಸ ಮಾಡುವ ಲಂಚದ ಹಣದ ತಿಂದ ದೇಶಗಳ ಸಂಘಟನೆಯಾಗಿದೆ. ಹೀಗಾಗಿ ಇಂಥ ಭದ್ರತಾ ಮಂಡಳಿ ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವ ಜಪಾನ್ ದೇಶವನ್ನು ಅಣ್ವಸ್ತ್ರ ದಾಳಿಯ ಮೂಲಕ ಮುಳುಗಿಸುವುದಾಗಿ ಉ. ಕೊರಿಯಾ ಸರ್ಕಾರದ ಮುಖವಾಣಿ ಸಂಸ್ಥೆಯಾದ ಕೊರಿಯಾ ಏಷ್ಯಾ- ಪೆಸಿಫಿಕ್ ಶಾಂತಿ ಸಮಿತಿ ಹೇಳಿದೆ. ಅಲ್ಲದೆ ಭದ್ರತಾ ಸಮಿತಿಯಲ್ಲಿ ತನ್ನ ವಿರುದ್ಧ ನಿರ್ಣಯ ಮಂಡಿಸಿದ ಅಮೆರಿಕ ದೇಶವನ್ನು ಬೂದಿ ಮಾಡಿ ಅದು ಕಗ್ಗತ್ತಲಿನಲ್ಲಿ ಕಳೆಯುವಂತೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಉ.ಕೊರಿಯಾ ಪ್ರಬಲ ಹೈಡ್ರೋಜನ್ ಬಾಂಬ್ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಆ ದೇಶಕ್ಕೆ ಮಾರಕವಾಗುವಂಥ ಕಠಿಣ ನಿರ್ಬಂಭಗಳನ್ನು ಭದ್ರತಾ ಸಮಿತಿ ಹೇರಿತ್ತು.