Asianet Suvarna News Asianet Suvarna News

ಉತ್ತರ ಕೊರಿಯಾದಿಂದ ಮತ್ತೊಂದು ಅಣ್ವಸ್ತ್ರ ಕ್ಷಿಪಣಿ ಪ್ರಯೋಗ

ಇದು ಉತ್ತರ ಕೊರಿಯಾ ಪ್ರಯೋಗಿಸಿದ ಅತಿ ದೂರಗಾಮಿ ಕ್ಷಿಪಣಿಯಾಗಿದೆ. ಅತಿ ಭಾರದ ಅಣ್ವಸ್ತ್ರಗಳನ್ನು ಕೂಡ ಹೊತ್ತೊಯ್ಯಲು ಕೂಡ ಸಮರ್ಥವಾಗಿದೆ ಎಂದು ಕೊರಿಯಾ ಸೆಂಟ್ರಲ್ ನ್ಯೂಸ್ ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.

North Korea Latest Missile Test

ಸೋಲ್(ಮೇ.15): ಇತ್ತೀಚೆಗೆ ಅಣುಕ್ಷಿಪಣಿ ಪ್ರಯೋಗಿಸಲು ಹೋಗಿ ವಿಫಲವಾಗಿದ್ದ ಉತ್ತರ ಕೊರಿಯಾ, ಇದೀಗ ಅಮೆರಿಕವನ್ನೂ ತಲುಪಬಲ್ಲ ಅಣ್ವಸ್ತ್ರ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಹೇಳಿಕೊಂಡಿದೆ.

ಉತ್ತರ ಕೊರಿಯಾ ಪರಮೋಚ್ಚ ನಾಯಕ ಕಿಮ್ ಜಂಗ್ ಉನ್, ಭಾನುವಾರ ಖದ್ದು ಕ್ಷಿಪಣಿ ಉಡಾವಣೆಯನ್ನು ವೀಕ್ಷಿಸಿದ್ದಾರೆ. ಹಾವ್ಸಾಂಗ್-12 ಹೆಸರಿನ ಈ ಕ್ಷಿಪಣಿ 787 ಕಿ.ಮೀ. ಪ್ರಯಾಣಿಸಿ ಜಪಾನ್ ಸಮುದ್ರದಲ್ಲಿ ಇಳಿದಿದೆ. 4,500 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಕ್ಷಿಪಣಿ ಹೊಂದಿದೆ.

ಇದು ಉತ್ತರ ಕೊರಿಯಾ ಪ್ರಯೋಗಿಸಿದ ಅತಿ ದೂರಗಾಮಿ ಕ್ಷಿಪಣಿಯಾಗಿದೆ. ಅತಿ ಭಾರದ ಅಣ್ವಸ್ತ್ರಗಳನ್ನು ಕೂಡ ಹೊತ್ತೊಯ್ಯಲು ಕೂಡ ಸಮರ್ಥವಾಗಿದೆ ಎಂದು ಕೊರಿಯಾ ಸೆಂಟ್ರಲ್ ನ್ಯೂಸ್ ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios