ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದರು.
ನವದೆಹಲಿ(ಏ.18): ಭಾರತೀಯ ಹಮಾಮಾನ ಇಲಾಖೆ ಬರದಿಂದ ಬಸವಳಿದ ರೈತರಿಗೆ ಸಂತಸದ ಸುದ್ದಿ ನೀಡಿದೆ. ಈ ವರ್ಷ ಬರವಿಲ್ಲ ದೇಶಾದ್ಯಂತ ಸಾಧರಣ ಮಳೆ ಬೀಳಲಿದ್ದು, ಅನ್ನದಾತರಿಗೆ ಈ ವರ್ಷ ಕಷ್ಟದಿಂದ ಮುಕ್ತಿ ಸಿಗಲಿದೆ.
2017ರಲ್ಲಿ ಶೇ.96ರಷ್ಟು ದೀರ್ಘಾವಧಿ ಸರಾಸರಿಯ ಮುಂಗಾರು ಮಳೆ ಬೀಳಲಿದ್ದು, ಶೇ.5 ರಷ್ಟು ಮಾತ್ರ ಕೊರತೆ ಉಂಟಾಗಲಿದೆ. ಉತ್ತಮ ಮಳೆ ಬೀಳುವುದರಿಂದ ದೇಶದ ಕೃಷಿ ವಲಯ ಸುಧಾರಾಣೆ ಕಾಣಲಿದೆ.ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದರು.
'ದೇಶದ ಬಹುತೇಕ ಕೃಷಿಕರು ಮಳೆಯಾಧಾರಿತ ಕೃಷಿಯನ್ನೆ ಅವಲಂಬಿಸಿದ್ದಾರೆ. ಅಲ್ಲದೆ ಆರ್ಥಿಕ ವ್ಯವಸ್ಥೆಯ ಮೇಲೆ ಮುಂಗಾರು ಪ್ರಭಾವ ಹೊಂದಿದೆ. ಮುನ್ಸೂಚನೆಗಳ ಪ್ರಕಾರ ಈ ಬಾರಿ ಉತ್ತಮ ಮಳೆ ಬೀಳಲಿದೆ' ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರಾದ ಕೆ.ಜೆ. ರಮೇಶ್ ತಿಳಿಸಿದ್ದಾರೆ.
'ಸಾಧರಣ ಮಳೆಯೆಂದರೆ ಸ್ಥರ ಮಳೆ ಎಂದರ್ಥ. ಕೃಷಿಗೆ ಸಾಕಷ್ಟು ನೀರಾವರಿ ಲಭ್ಯವಾಗಲಿದ್ದು, ರೈತರು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಿ' ಈ ವರ್ಷ ಎಲ್ಲರು ಸಂತಸ ಲಭಿಸಲಿದೆ' ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವರಾದ ಡಾ. ಹರ್ಷವರ್ಧನ್ ಅವರು ಟ್ವೀಟ್ ಮಾಡಿದ್ದಾರೆ.
ಹವಾಮಾನ ಇಲಾಖೆ ನೀಡಿರುವ ಪ್ರಮುಖ ಅಂಶಗಳು
1) 2017ರ ನೈರುತ್ಯ ಮುಂಗಾರು ಶೇ.96 ದೀರ್ಘಾವಧಿ ಸರಾಸರಿಯೊಂದಿಗೆ ಸಾಧಾರಣ ಮಳೆ ಸಂಭವ
2) ದೇಶದ ಎಲ್ಲ ಭಾಗಗಳಲ್ಲಿ ಸರಾಸರಿ ಮಳೆಯಾಗಲಿದೆ
3) ಎಲ್ ನಿನೊ ಕ್ಷೀಣವಾಗಿ ಹಿಂದೂ ಮಹಾಸಾಗರದ ದ್ವಿದ್ರವಿ ಒಂದುಗೂಡಿ ಮುಂಗಾರು ಉತ್ತಮವಾಗಲಿದೆ
4) ಮಳೆಯ ಪ್ರಮಾಣ ಶೇ.5 ರಷ್ಟು ಮಾತ್ರ ಕೊರತೆ ಕಾಣಲಿದೆ
5) 2017ರ ಜೂನ್ ಮೊದಲೆ ಮುಂಗಾರು ಪ್ರವೇಶ. ಜುಲೈ'ನಿಂದ ಸೆಪ್ಟೆಂಬರ್'ವರೆಗೂ ಶೇ.70 ರಷ್ಟು ಉತ್ತಮ ಮಳೆ.
