ಬೆಂಗಳೂರು[ಅ. 03]  ಯಾರೋ ಸರ್ಕರಿ ನೌಕರ, ಹಿರಿಯ ಅಧಿಕಾರ ಯಾವುದೋ ಕಾರಣಕ್ಕೆ ನನಗೆ ಆಗುವುದಿಲ್ಲ. ಆತನಿಗೆ ಬುದ್ಧಿ ಕಲಿಸಬೇಕು.. ಹಾಗಾದರೆ ಆತ ಭ್ರಷ್ಟಾಚಾರ ಮಾಡಿದ್ದಾನೆ ಎಂದು ಒಂದು ಮೂಗರ್ಜಿಯನ್ನು ಬರೆದು ಲೋಕಾಯುಕ್ತಕ್ಕೋ.. ಪೊಲೀಸರಿಗೋ..ಎಸಿಬಿಗೋ ಕಳಿಸಿದ್ರೆ ಆಯ್ತು ಬಿಡಿ! ಇನ್ನು ಮುಂದೆ ಇಂಥ ಕೆಲಸಗಳನ್ನೆಲ್ಲ ಮಾಡಲು ಸಾಧ್ಯವೇ ಇಲ್ಲ.

ಮೂಗರ್ಜಿಗಳನ್ನು ಮೂಲೆಯಲ್ಲಿಡಲು ಆದೇಶ ನೀಡಲಾಗಿದೆ. ಸರ್ಕಾರಿ ನೌಕರರ ವಿರುದ್ಧ ನೀಡುವ ಅನಾಮಧೇಯ ಪತ್ರಗಳಿಗೆ ಬೆಲೆ ಇಲ್ಲ. ಅನಾಮಧೇಯ ಪತ್ರಗಳ ಮೇಲೆ ತನಿಖೆ ನಡೆಸದೇ ಇರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ನೆರೆ ಪರಿಹಾರಕ್ಕೆ ಹಣ ಇಲ್ಲ: ಬಿಎಸ್ ಯಡಿಯೂರಪ್ಪ

ಸರ್ಕಾರಿ ನೌಕರರ ಬಹುದಿನದ ಬೇಡಿಕೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಈಡೇರಿಸಿದ್ದಾರೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ಅನಾಮಧೇಯ ಪತ್ರಗಳಿಗೆ ಬೆಲೆ ನೀಡದಿರಿ. ಹೆಸರು ವಿಳಾಸ ಇಲ್ಲದೆ ಸಲ್ಲಿಕೆಯಾಗುವ ದೂರುಗಳನ್ನು ಫೈಲ್ ಮಾಡಿ ಇಡಿ. ಹೆಸರು ಇಲ್ಲದೆ ಸಲ್ಲಿಕೆಯಾಗುವ ದೂರಿನ ಮೇಲೆ ತನಿಖೆ ನಡೆಸಬೇಡಿ ಎಂದು ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.