ಇವತ್ತಿನಿಂದಲೇ ನೂತನ ದರ ಅನ್ವಯವಾಗಲಿದ್ದು, ಬೆಂಗಳೂರಿನಲ್ಲಿ 14.2 ಕಿಲೋ ಇಂಡೇನ್ ಗ್ಯಾಸ್ ಸಿಲಿಂಡರ್'ಗೆ 750.50 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ನವದೆಹಲಿ(ಮಾ. 01): ಸಬ್ಸಿಡಿರಹಿತ ಎಲ್'ಪಿಜಿ ಅಡುಗೆ ಅನಿಲದ ಬೆಲೆಯಲ್ಲಿ 86 ರೂಪಾಯಿಯಷ್ಟು ಭಾರೀ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ದರಗಳ ಅನುಗುಣವಾಗಿ ಭಾರತದಲ್ಲಿ ಅಡುಗೆ ಅನಿಲದ ದರ ಏರಿಸಲಾಗಿದೆ. ಸಬ್ಸಿಡಿಯುಕ್ತ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಪ್ರತಿಯೊಬ್ಬರಿಗೂ ವರ್ಷಕ್ಕೆ 12 ಸಿಲಿಂಡರ್'ಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಈ ಹನ್ನೆರಡರ ಗಡಿ ದಾಟಿದರೆ ಸಬ್ಸಿಡಿ ಸಿಗುವುದಿಲ್ಲ. ಇಂತಹ ಸಬ್ಸಿಡಿರಹಿತ ಸಿಲಿಂಡರ್'ಗಳಿಗೆ ಮಾತ್ರ ಬೆಲೆಯನ್ನು ಏರಿಕೆ ಮಾಡಲಾಗಿದೆ.

ಇವತ್ತಿನಿಂದಲೇ ನೂತನ ದರ ಅನ್ವಯವಾಗಲಿದ್ದು, ಬೆಂಗಳೂರಿನಲ್ಲಿ 14.2 ಕಿಲೋ ಇಂಡೇನ್ ಗ್ಯಾಸ್ ಸಿಲಿಂಡರ್'ಗೆ 750.50 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಸಿಲಿಂಡರ್'ಗೆ ಸಬ್ಸಿಡಿ ಪ್ರಮಾಣವನ್ನು 307 ರೂಪಾಯಿಗೆ ಏರಿಸಲಾಗಿದೆ. ಅಂದರೆ, ಸಬ್ಸಿಡಿಸಹಿತ ಎಲ್'ಪಿಜಿ ಸಿಲಿಂಡರ್ ಬೆಲೆ 443 ರೂಪಾಯಿಯಲ್ಲೇ ಮುಂದುವರಿಯಲಿದೆ.