ನೋಕಿಯಾ ಮೊಬೈಲ್ ಸ್ಫೋಟ : ಬಾಲಕಿ ಸಾವು

First Published 20, Mar 2018, 11:39 AM IST
Nokia 5233 Explodes Kills Teen in Odisha
Highlights

ಇಷ್ಟು ದಿನ  ಕೇವಲ ಕ್ಸಿಯೋಮಿ ಫೋನ್ ಸ್ಫೋಟದ ಸುದ್ದಿ ಕೇಳುತ್ತಿದ್ದೆವು. ಆದರೆ ಇದೀಗ ಒಡಿಶಾದ ಕೆರಿಕನಿ  ಪ್ರದೇಶದಲ್ಲಿ ನೋಕಿಯಾ 5233 ಫೋನ್ ಸ್ಫೋಟವಾಗಿ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. 

ಒಡಿಶಾ :  ಇಷ್ಟು ದಿನ  ಕೇವಲ ಕ್ಸಿಯೋಮಿ ಫೋನ್ ಸ್ಫೋಟದ ಸುದ್ದಿ ಕೇಳುತ್ತಿದ್ದೆವು. ಆದರೆ ಇದೀಗ ಒಡಿಶಾದ ಕೆರಿಕನಿ  ಪ್ರದೇಶದಲ್ಲಿ ನೋಕಿಯಾ 5233 ಫೋನ್ ಸ್ಫೋಟವಾಗಿ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ.  ಫೋನ್’ನಲ್ಲಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಾರ್ಜಿಂಗ್’ಗೆ ಇಟ್ಟು ಫೋನ್’ನಲ್ಲಿ ಸಂಭಾಷಣೆ ನಡೆಸುತ್ತಿದ್ದ ವೇಳೆ ಸ್ಫೊಟಗೊಂಡಿದೆ.

ಚಾರ್ಜ್ ಆಗುತ್ತಿದ್ದಾಗಲೇ ಮಾತನಾಡುವ ವೇಳೆ ಫೋನ್ ಸ್ಫೋಟವಾಗಿ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು ಗಂಭೀರ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದಾಳೆ. ವಿದ್ಯುತ್ ಪ್ರವಾಹ ನಿರಂತಯರವಾಗಿದ್ದು, ಇದೇ ವೇಳೆ ಮಾತನಾಡುತ್ತಿದ್ದ ಕಾರಣದಿಂದ  ಅನಾಹುತ ಸಂಭವಿಸಿದೆ.

loader