ಬೀದಿ ಬದಿ ಮೂತ್ರ ವಿಸರ್ಜಿಸುವುದನ್ನು ಆಕ್ಷೇಪಿಸಿದವನನ್ನು ಅಟ್ಟಾಡಿಸಿ ಥಳಿಸಿದ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ರಸ್ತೆ ಬದಿ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿಯನ್ನು ಗೌರವ್ ವಸೋಯಾ ಎಂಬವರು ಆಕ್ಷೇಪಿಸಿದ್ದಾರೆ. ಅದಕ್ಕೆ ಕೋಪಗೊಂಡ ಆ ವ್ಯಕ್ತಿ ಗೌರವ್ ಜೊತೆ ವಾಗ್ವಾದಕ್ಕಿಳಿದಿದ್ದಾನೆ.ನ್ನುಳಿದವರು ಕೂಡಾ ಆತನ ಬೆಂಬಲಕ್ಕೆ ನಿಂತಿದ್ದಾರೆ. ಬಳಿಕ ಅವರೆಲ್ಲರೂ ಸೇರಿ ಗೌರವ್’ನನ್ನು ಅಟ್ಟಾಡಿಸಿಕೊಂಡು ಹೋಗಿ, ಥಳಿಸಿದ್ದಾರೆ.

ನವದೆಹಲಿ (ಜು.01): ಬೀದಿ ಬದಿ ಮೂತ್ರ ವಿಸರ್ಜಿಸುವುದನ್ನು ಆಕ್ಷೇಪಿಸಿದವನನ್ನು ಅಟ್ಟಾಡಿಸಿ ಥಳಿಸಿದ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆ ಬದಿ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿಯನ್ನು ಗೌರವ್ ವಸೋಯಾ ಎಂಬವರು ಆಕ್ಷೇಪಿಸಿದ್ದಾರೆ. ಅದಕ್ಕೆ ಕೋಪಗೊಂಡ ಆ ವ್ಯಕ್ತಿ ಗೌರವ್ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಇನ್ನುಳಿದವರು ಕೂಡಾ ಆತನ ಬೆಂಬಲಕ್ಕೆ ನಿಂತಿದ್ದಾರೆ. ಬಳಿಕ ಅವರೆಲ್ಲರೂ ಸೇರಿ ಗೌರವ್’ನನ್ನು ಅಟ್ಟಾಡಿಸಿಕೊಂಡು ಹೋಗಿ, ಥಳಿಸಿದ್ದಾರೆ.

ಪೊಲೀಸರು 5 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಕಳೆದ ಎರಡು ತಿಂಗಳಿನಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ಮೇ.29ರಂದು ದೆಹಲಿಯಲ್ಲಿ ಇಂತಹದ್ದೇ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಇಬ್ಬರು ಥಳಿಸಿ ಕೊಂದಿದ್ದರು.