ಸ್ಟಾಕ್‌ಹೋಂ(ಅ.4): ಪ್ರಸಕ್ತ ಸಾಲಿನ ಭೌತಶಾಸ ನೊಬೆಲ್ ಮೂವರು ಬ್ರಿಟಿಷ್ ವಿಜ್ಞಾನಿಗಳ ಪಾಲಾಗಿದೆ. ವಿಲಕ್ಷಣ ಭೌತವಸ್ತುಗಳ ರಹಸ್ಯವನ್ನು ಬಯಲುಗೊಳಿಸಿದ್ದಕ್ಕಾಗಿ ವಿಜ್ಞಾನಿಗಳಾದ ಡೇವಿಡ್ ಥೌಲೆಸ್, ಡಂಕನ್ ಹಲ್ಡೇನ್ ಮತ್ತು ಮೈಕೆಲ್ ಕೋಸ್ಟರ್‌ಲಿಟ್ಝ್‌ರಿಗೆ ಈ ಗೌರವ ಸಂದಿದೆ.
‘‘ಈ ಸಾಧಕರು ಭೌತವಸ್ತುಗಳು ವಿಚಿತ್ರ ಸ್ಥಿತಿಗೆ ತಲುಪುವಂತಹ ಹೊಸ ಜಗತ್ತನ್ನು ನಮಗೆ ತೋರಿಸಿದ್ದಾರೆ. ಸುಧಾರಿತ ಉಪಕರಣಗಳನ್ನು ಬಳಸಿ ಸೂಪರ್‌ಕಂಡಕ್ಟರ್‌ಗಳು, ಸೂಪರ್‌ಲ್ಯ್ೂಯಡ್‌ಗಳು ಅಥವಾ ತೆಳ್ಳನೆಯ ಕಾಂತೀಯ ಪದರಗಳು ಮತ್ತಿತರ ಭೌತವಸ್ತುಗಳ ಅಸಾಮಾನ್ಯ ಸ್ಥಿತಿಯನ್ನು ಅಥವಾ ಹಂತಗಳನ್ನು ಪ್ರದರ್ಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಭೌತ ನೊಬೆಲ್ ಅನ್ನು ಈ ಮೂವರು ವಿಜ್ಞಾನಿಗಳಿಗೆ ನೀಡುತ್ತಿದ್ದೇವೆ,’’ ಎಂದು ನೊಬೆಲ್ ತೀರ್ಪುಗಾರರು ಹೇಳಿದ್ದಾರೆ.
9.31 ಲಕ್ಷ ಯುಎಸ್ ಡಾಲರ್ ಮೊತ್ತದ ಪ್ರಶಸ್ತಿಯ ಅರ್ಧಭಾಗ ಥೌಲೆಸ್ ಅವರಿಗೆ ಸಂದರೆ, ಉಳಿದರ್ಧವನ್ನು ಡಂಕನ್ ಮತ್ತು ಮೈಕೆಲ್ ಹಂಚಿಕೊಳ್ಳಲಿದ್ದಾರೆ.
