ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮನೆಯಲ್ಲಿ ಇಂದು ಬೆಳಗಿನ ಜಾವ ದರೋಡೆ ನಡೆದಿದ್ದು ನೊಬೆಲ್ ಪಾರಿತೋಷಕದ ಪ್ರತಿಕೃತಿಯನ್ನು ದರೋಡೆಕೋರರರು ಕದ್ದೋಯ್ದಿದ್ದಾರೆ.
ನವದೆಹಲಿ (ಫೆ.07): ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮನೆಯಲ್ಲಿ ಇಂದು ಬೆಳಗಿನ ಜಾವ ದರೋಡೆ ನಡೆದಿದ್ದು ನೊಬೆಲ್ ಪಾರಿತೋಷಕದ ಪ್ರತಿಕೃತಿಯನ್ನು ದರೋಡೆಕೋರರರು ಕದ್ದೋಯ್ದಿದ್ದಾರೆ.
ಪೊಲೀಸ್ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಕಳ್ಳರು ಪ್ರಶಸ್ತಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಅದರ ಹಣಕಾಸಿನ ಮೌಲ್ಯವನ್ನಲ್ಲ ಎಂದು ಸತ್ಯಾರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.
ನೊಬೆಲ್ ಪ್ರತಿಕೃತಿಯ ಜೊತೆ ಕೆಲವು ಪ್ರಮುಖ ಪ್ರಶಸ್ತಿಗಳು, ಪಿತ್ರಾರ್ಜಿತ ಚಿನ್ನಾಭರಣಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯಾಗಿದೆ.
