ನವದೆಹಲಿ(ಅ.13) ಕೇಂದ್ರ ಹವಾಮಾನ ಇಲಾಖೆ ಹೇಳುವಂತೆ ಮುಂದಿನ ಚಳಿಗಾಲ ವಾಡಿಕೆಗೆ ಹೋಲಿಸಿದರೆ ಬಿಸಿಯಾಗಿರಲಿದೆ. ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉಷ್ಣಾಂಶ ವಾಡಿಕೆಗಿಂತ ಕೊಂಚ ಜಾಸ್ತಿಯಾಗಿರಲಿದೆ.

ಡಿಸೆಂಬರ್ ನಿಂದ ಜನವರಿವರೆಗೆ ಬಿಸಿ ಮತ್ತಷ್ಟು ಜಾಸ್ತಿ ಇರಲಿದೆ. ಹವಾಮಾನ ಇಲಾಖೆಯ ಡಿ.ಎಸ್.ಪೈ ಹೇಳುವಂತೆ ದಕ್ಷಿಣ ಏಷ್ಯಾ ಭಾಗದಲ್ಲಿ ಈ ಬಾರಿ ಚಳಿಗಾಲದ ಪ್ರಭಾವ ಕಡಿಮೆ ಇರಲಿದ್ದು ದೇಶದ ನೈಋತ್ಯ ಭಾಗದಲ್ಲಿಯೂ ಇದೇ ವಾತಾವರಣ ಇರಲಿದೆ ಎಂದಿದ್ದಾರೆ.

ಬಿಸಿ ಎಲ್ ನಿನೋ ಫೆಸಿಫಿಕ್ ಸಾಗರದಲ್ಲಿದ್ದು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಉಷ್ಣಾಂಶದ ಮೇಲೆ ಪರಿಣಾಮ ಬೀರಲಿದೆ. ಇನ್ನೊಂದು ಕಡೆ ದೆಹಲಿಯ ಗಾಳಿ ಮತ್ತಷ್ಟು ಹದಗೆಡುತ್ತಿದೆ ಎಂದು ಅವರು ತಿಳಿಸಿದ್ದಾರೆ.