ನೀರಿನ ಸಮಸ್ಯೆ: Work From Homeಗೆ ಸೂಚಿಸಿದ ಕಂಪನಿಗಳು

ದೇಶದಲ್ಲಿ ಪೂರ್ವ ಮುಂಗಾರು ಕೊರತೆ ತೀವ್ರವಾಗಿ ಕಾಡಿದ್ದು ಇದರಿಂದ ನೀರಿನ ಸಮಸ್ಯೆ ಎದುರಾಗಿದೆ. ಇತ್ತ ಚೆನ್ನೈನಲ್ಲಿ ಐಟಿ ಕಂಪನಿಗಳು ನೀರಿನ ಕೊರತೆಯಿಂದ ಮನೆಯಿಂದ ಕೆಲಸ ಮಾಡುವಂತೆ ಕೆಲಸಗಾರರಿಗೆ ಸೂಚಿಸಿವೆ.

No Water in Chennai IT Firms Tell Staff To Work From Home

ಚೆನ್ನೈ [ಜೂ.13] : ಬಿಸಿಲ ಬೇಗೆಗೆ ಅನೇಕ ರಾಜ್ಯಗಳು ತತ್ತರಿಸಿದ್ದು, ದೇಶದಲ್ಲಿ ತೀವ್ರ ಪ್ರಮಾಣದಲ್ಲಿ ನೀರಿನ ಕೊರತೆ ಎದುರಾಗಿದೆ. ಇದರಿಂದ ಚೆನ್ನೈ  ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ನಿರ್ವಹಿಸಲು ಸೂಚನೆ ನೀಡಿವೆ. 

ನೀರಿನ ಕೊರತೆ ಹೆಚ್ಚಾಗುತ್ತಲೇ ಇದ್ದು, ತಮಗೆ ಅನುಕೂಲವಾದ ಸ್ಥಳದಿಂದ ಕೆಲಸ ನಿರ್ವಹಿಸಲಿ ಎಂದು ನಿರ್ದೇಶನ ನೀಡಿವೆ. 

ಚೆನ್ನೈನಲ್ಲಿ ಇದುವರೆಗೂ ಕೂಡ ಮಳೆಯಾಗದ ಕಾರಣ ತೀವ್ರ ನೀರಿನ ಕೊರತೆ ಕಾಡುತ್ತಿದೆ. ನೀರಿನ ಸಮಸ್ಯೆ ನಿರ್ವಹಣೆ ಮಾಡುವ ದೃಷ್ಟಿಯಿಂದ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಪ್ಶನ್ ನೀಡಿವೆ. 

ಮುಂದಿನ ಮೂರು ತಿಂಗಳ ಕಾಲ ನೀರಿನ ಸಮಸ್ಯೆ ಕಾಡಬಹುದಾಗಿದ್ದು, ಸುಮಾರು 12 ಐಟಿ ಕಂಪನಿಗಳು ತಮ್ಮ 5 ಸಾವಿರ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತಿಳಿಸಿವೆ.   

ಇನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರಿನ ಬಳಕೆಗೆ ಒತ್ತು ನೀಡುತ್ತಿದ್ದು, ಉಳಿತಾಯಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಕುಡಿಯುವ ನೀರನ್ನು ಮನೆಯಿಂದಲೇ ತರಲು ತಿಳಿಸಲಾಗಿದೆ. 

Latest Videos
Follow Us:
Download App:
  • android
  • ios