ಬೆಂಗಳೂರು [ಆ.21] : ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ ಎಂದು ಬಿಜೆಪಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. 

 ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆ. ಸಚಿವ ಸ್ಥಾನ ಎಲ್ಲ ಆಮೇಲೆ. ನಾನು ಇತ್ತೀಚೆಗೆ ಬಾಯಿ ತಪ್ಪಿ ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. 

ಮನೆ ಕಟ್ಟಿಕೊಡ್ಲಿಲ್ಲ ಅಂದ್ರೆ ಸರ್ಕಾರವನ್ನೇ ಕೆಡವಿ ಬಿಡ್ತೇನೆ ಎಂದ ಬಿಜೆಪಿ ಶಾಸಕ

ಸರ್ಕಾರ ಬೀಳಿಸುತ್ತೇನೆ ಎಂಬ ಉದ್ದೇಶದಿಂದ ನಾನು ಮಾತನಾಡಿರಲಿಲ್ಲ. ಹೀಗಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ದೇವರ ದಯೆಯಿಂದ ಕುಟುಂಬದಲ್ಲಿ ಯಾರಾದರೂ ಒಬ್ಬರು ಸಚಿವರಾಗಿರುತ್ತಾರೆ ಎಂದರು.