ಕೇಂದ್ರ ಸರ್ಕಾರ ಘೋಷಿಸಿರುವ ನೋಟ್ ಬ್ಯಾನ್ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸ್ ಬೆಂಗಳೂರಿನ ಮೇಲೆ ಪರಿಣಾಮ ನೀರಿಲ್ಲ. ಬೆಂಗಳೂರಿನಲ್ಲಿ ಸಹಜ ಸ್ಥಿತಿ ಇದ್ದು, ಆಟೋ, ಟ್ಯಾಕ್ಸಿ, ಬಸ್, ಮೆಟ್ರೋ ಎಂದಿನಂತೆ ಓಡಾಡುತ್ತಿವೆ. ಮಾರುಕಟ್ಟೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಬೆಂಗಳೂರು(ನ.28): ಕೇಂದ್ರ ಸರ್ಕಾರ ಘೋಷಿಸಿರುವ ನೋಟ್ ಬ್ಯಾನ್ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸ್ ಬೆಂಗಳೂರಿನ ಮೇಲೆ ಪರಿಣಾಮ ನೀರಿಲ್ಲ. ಬೆಂಗಳೂರಿನಲ್ಲಿ ಸಹಜ ಸ್ಥಿತಿ ಇದ್ದು, ಆಟೋ, ಟ್ಯಾಕ್ಸಿ, ಬಸ್, ಮೆಟ್ರೋ ಎಂದಿನಂತೆ ಓಡಾಡುತ್ತಿವೆ. ಮಾರುಕಟ್ಟೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಬೆಂಗಳೂರಿನ ಕೆ ಆರ್ ಮಾರ್ಕೆಟ್'ನಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದ್ದು, ಸಾಮಾನ್ಯ ದಿನದಂತೆ ಇಂದೂ ಸಹ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತಿದೆ.
ಮೆಟ್ರೋ ಯಥಾಸ್ಥಿತಿಯಲ್ಲಿ ಓಡಾಡುತ್ತಿದೆ. ಜನರೂಮೆಟ್ರೋದಲ್ಲಿ ಎಂದಿನಂತೆ ಸಂಚರಿಸುತ್ತಿದ್ದಾರೆ. ಇನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಎಂದಿಗಿಂತ ಜಾಸ್ತಿ ಸಂಖ್ಯೆಯಲ್ಲಿ ಆಟೋ ಓಡಿಸುವ ಮೂಲಕ ಮೋದಿಗೆ ಬೆಂಬಲ ನೀಡುತ್ತಿದ್ದಾರೆ.
ಬೆಂಗಳೂರಿನ ಶಾಲೆಗಳ ಮೇಲೂ 'ಆಕ್ರೋಶ್ ದಿವಸ್' ಯಾವುದೇ ಪರಿಣಾಮ ಬೀರಿಲ್ಲ. ಶಾಲೆಗಳಿಗೆ ರಜೆ ಘೋಷಿಸದೆ ಶಾಲೆಗಳು ಎಂದಿನಂತೆ ತೆರೆದಿವೆ.
ಒಟ್ಟಾರೆಯಾಗಿ ಪ್ರತಿಪಕ್ಷಗಳು ಕರೆ ನೀಡಿದ್ದ 'ಆಕ್ರೋಶ್ ದಿವಸ್'ಗೆ ಜನ ಬೆಂಬಲ ಸಿಗದಿರುವುದರಿಂದ ಬಂದ್ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎನ್ನಬಹುದು.
