ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷವು ಕಳುಹಿಸಿರುವ 40 ಮಂದಿ ಪ್ರಚಾರಕರ ಪಟ್ಟಿಯಲ್ಲಿ ಮುಲಾಯಂ ಸಹೋದರ ಹಾಗೂ ಮಾಜಿ ಸಚಿವನಾಗಿರುವ ಶಿವಪಾಲ್ ಹೆಸರನ್ನು ಸೇರಿಸಲಾಗಿಲ್ಲ.

ಲಕ್ನೋ (ಜ.24): ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಸಮಾಜವಾದಿ ಪಕ್ಷವು ಬಿಡುಗಡೆ ಮಾಡಿರುವ ‘ತಾರಾ ಪ್ರಚಾರಕ’ರ ಪಟ್ಟಿಯಿಂದ ಪಕ್ಷದ ಪ್ರಭಾವಿ ಮುಖಂಡ ಶಿವಪಾಲ್ ಯಾದವ್ ಅವರಿಗೆ ಕೊಕ್ ನೀಡಲಾಗಿದೆ.

ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷವು ಕಳುಹಿಸಿರುವ 40 ಮಂದಿ ಪ್ರಚಾರಕರ ಪಟ್ಟಿಯಲ್ಲಿ ಮುಲಾಯಂ ಸಹೋದರ ಹಾಗೂ ಮಾಜಿ ಸಚಿವನಾಗಿರುವ ಶಿವಪಾಲ್ ಹೆಸರನ್ನು ಸೇರಿಸಲಾಗಿಲ್ಲ.

ಪಕ್ಷದ ಪ್ರದಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಹೆಸರು ಕಾಣಿಸಿಕೊಂಡಿದೆ.

 ಅಖಿಲೇಶ್ ಯಾದವ್ ಹಾಗೂ ಪತ್ನಿ ಡಿಂಪಲ್ ಯಾದವ್ ಮತ್ತಿತರ ಪ್ರಭಾವಿ ಪ್ರಮುಖ ನಾಯಕರ ಹೆಸರು ಪಟ್ಟಿಯಲ್ಲಿದೆ.

ಫೆ. 11ರಿಂದ ಏಳು ಹಂತಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ.