4 ರಾಜ್ಯದ ಪ್ರಮುಖ ಮಲ್ಟಿಫ್ಲೆಕ್ಸ್'ಗಳಲ್ಲಿ ಪದ್ಮಾವತ್ ಬಿಡುಗಡೆಯಿಲ್ಲ

First Published 24, Jan 2018, 10:11 PM IST
No screening of Padmaavat in 4 states says major multiplex body
Highlights

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ 13ನೇ ಶತಮಾನದ ಮೇವರ್'ನ ಮಹಾರಾಜ ರತನ್ ಸಿಂಗ್ ಹಾಗೂ ಅಲ್ಲಾದ್ದೀನ್ ಖಿಲ್ಜಿ ನಡುವೆ ನಡೆದ ಯುದ್ಧಕ್ಕೆ ಸಂಬಂಧಿಸಿದ ಸಿನಿಮಾವಾಗಿದೆ.

ನವದೆಹಲಿ(ಜ.24): ಗಲಭೆ ಹೆಚ್ಚಾಗಿರುವ ಕಾರಣ ರಾಜಸ್ಥಾನ, ಗುಜರಾತ್,ಮಧ್ಯಪ್ರದೇಶ ಹಾಗೂ ಗೋವಾ ರಾಜ್ಯಗಳಲ್ಲಿ ವಿವಾದಿತ ಪದ್ಮಾವತ್ ಚಿತ್ರ ಬಿಡುಗಡೆ  ಮಾಡದಿರಲು ಪ್ರಮುಖ ಮಲ್ಟಿಫ್ಲೆಕ್ಸ್'ಗಳು ನಿರ್ಧರಿಸಿವೆ.

ಕಾನೂನು ಸುವ್ಯನಸ್ಥೆಯಿಂದ ಮಾಲ್'ಗಳಲ್ಲಿ ಸಾರ್ವಜನಿಕರ ಸುರಕ್ಷಣೆ ಹಾಗೂ ಆಸ್ತಿ ಪಾಸ್ತಿಯ ರಕ್ಷಣೆಯ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮಾಹಿತಿಯ ಮೇರೆಗೆ ನಾಲ್ಕು ರಾಜ್ಯಗಳಲ್ಲಿ ಚಿತ್ರ ಪ್ರದರ್ಶಿವುದಿಲ್ಲ ಎಂದು ಸಂಘದ ಅಧ್ಯಕ್ಷ ದೀಪಕ್ ಅಶೀರ್ ತಿಳಿಸಿದ್ದಾರೆ.

ಪ್ರಮುಖ ಮಲ್ಟಿಫ್ಲೆಕ್ಸ್'ಗಳು ದೇಶಾದ್ಯಂತ 1800-2000 ಪರದೆಗಳನ್ನು ಹೊಂದಿದೆ.  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ 13ನೇ ಶತಮಾನದ ಮೇವರ್'ನ ಮಹಾರಾಜ ರತನ್ ಸಿಂಗ್ ಹಾಗೂ ಅಲ್ಲಾದ್ದೀನ್ ಖಿಲ್ಜಿ ನಡುವೆ ನಡೆದ ಯುದ್ಧಕ್ಕೆ ಸಂಬಂಧಿಸಿದ ಸಿನಿಮಾವಾಗಿದೆ.

loader