ಬೆಂಗಳೂರು[ಜು. 07] ಎಂಟು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಸಿಎಂ ಕುಮಾರಸ್ವಾಮಿ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಹಾಗಾದರೆ ದೋಸ್ತಿ ಸರಕಾರ ಉಳಿಸಿಕೊಳ್ಳಲು ಸಿಎಂ ಯಾವೆಲ್ಲ ಕ್ರಮಕ್ಕೆ ಮುಂದಾಗಬಹುದು.

1. ಅತೃಪ್ತರಿಗೆ ಮಂತ್ರಿಗಿರಿ:  ದೋಸ್ತಿ ಪಕ್ಷ ಕಾಂಗ್ರೆಸ್ ನೊಂದಿಗೆ ಸಭೆ ನಡೆಸಿ ಅತೃಪ್ತರಿಗೆ ಮಂತ್ರಿಗಿರಿ ನೀಡಿ ಬಂಡಾಯ ಶಮನ ಮಾಡಿ ಸರಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಬಹುದು.

‘ರಾಜೀನಾಮೆ ಪರ್ವ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್’

2. ಸರಕಾರ ವಿಸರ್ಜನೆ: ಸರಕಾರ ವಿಸರ್ಜನೆ ಮಾಡಲು ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಬಹುದು.

3. ಚುನಾವಣೆಗೆ ಹೋಗೋಣ: ಕಾಂಗ್ರೆಸ್ ಸಖ್ಯ ಕಡಿದುಕೊಂಡು ನೇರವಾಗಿ ಜನರ ಬಳಿಗೆ ಹೋಗೋಣ ಎಂದು ತಂದೆ ದೇವೇಗೌಡರ ಮಾತಿನಂತೆ ನಡೆದುಕೊಳ್ಳಬಹುದು.

4. ಉಳಿದ ಶಾಸಕರ ಮೇಲೆ ಹಿಡಿತ:  ಪಕ್ಷದಲ್ಲಿ ಉಳಿದುಕೊಂಡಿರುವ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಕಡೆ ತೆರಳದಂತೆ ನೋಡಿಕೊಳ್ಳಬಹುದು.