ಮುಂದಿನ ಅವಧಿಯಲ್ಲಿ ಪ್ಯಾಸೆಂಜರ್, ವಿಶೇಷ ರೈಲುಗಳ ಸೇರಿದಂತೆ ಯಾವುದೇ ಪ್ರಯಾಣ ದರವನ್ನು ಏರಿಸುವ ಯಾವುದೇ ಪ್ರಸ್ತಾಪವಿಲ್ಲ.
ನವದೆಹಲಿ(ಡಿ.27): ರೈಲಿನಲ್ಲಿ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಮುಂದಿನ ವರ್ಷ ಆಯವ್ಯಯದಲ್ಲಿ ರೈಲ್ವೆ ಪ್ರಯಾಣ ದರಗಳನ್ನು ಏರಿಸುವ ಯಾವುದೇ ಪ್ರಸ್ತಾವನೆ ಇಲ್ಲವೆಂದು ಸಂಸತ್ತಿಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ರಾಜ್ಯ ರೈಲ್ವೆ ಖಾತೆ ಸಚಿವ ರಾಜನ್ ಗೊಹೇನ್, ಕಳೆದ ವರ್ಷದ ಅವಧಿಯಲ್ಲಿ ದೆಹಲಿ -ಮುಂಬೈ ನಡುವಿನ ಪ್ರಯಾಣ ದರವನ್ನು ಶೇ0.68ರಿಂದ 0.99 ಏರಿಸಲಾಗಿದೆ.
ಮುಂದಿನ ಅವಧಿಯಲ್ಲಿ ಪ್ಯಾಸೆಂಜರ್, ವಿಶೇಷ ರೈಲುಗಳ ಸೇರಿದಂತೆ ಯಾವುದೇ ಪ್ರಯಾಣ ದರವನ್ನು ಏರಿಸುವ ಯಾವುದೇ ಪ್ರಸ್ತಾಪವಿಲ್ಲ. ಬೇಡಿಕೆಯ ಆಧಾರದ ಮೇಲೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ, ವಿಶೇಷ ದರಗಳ ಅನ್ವಯದಲ್ಲಿ ವಿಶೇಷ ರೈಲುಗಳನ್ನು ಪರಿಚಯಿಸಲಾಗಿದೆ.ಈ ರೈಲುಗಳು ದ್ವಿತೀಯ ದರ್ಜೆ ಬೋಗಿಗಳಿಗೆ ಶೇ.10 ದರ, ಕಾಯ್ದಿರಿಸಿದ ಹಾಗೂ ಎಸಿ ಬೋಗಿಗಳಿಗೆ ಶೇ.30 ದರ ವಿಧಿಸಲಾಗಿದೆ' ಎಂದು ಸಚಿವರು ತಿಳಿಸಿದರು.
