ಅಡಕೆಯಲ್ಲಿ ವಿಷ ಇಲ್ಲ – ಕೇಂದ್ರಕ್ಕೆ ಮನವರಿಕೆ : ಬಿಎಸ್’ವೈ

First Published 9, Mar 2018, 12:41 PM IST
No Poison In Areca
Highlights

ಅಡಕೆಯಲ್ಲಿ ವಿಷಕಾರಿ ಅಂಶ ಅಡಗಿದೆ ಎಂಬ ವರದಿ ತಪ್ಪು. ನಾವು ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿಯಾಗಿ ಅವರಿಗೆ ವಿವರಿಸಿದ್ದೇವೆ. ನಮ್ಮ ವಿವರಣೆಯನ್ನು ಒಪ್ಪಿಕೊಂಡಿರುವ ನಡ್ಡಾ ಅವರು ಅಡಕೆಯಿಂದ ಹಾನಿಯಿಲ್ಲ ಎಂಬ ಬಗ್ಗೆ ಕೇಂದ್ರ ಶೀಘ್ರವೇ ಪ್ರಕಟಣೆ ಹೊರಡಿಸುವ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು. 

ನವದೆಹಲಿ: ಅಡಕೆಯಲ್ಲಿ ವಿಷಕಾರಿ ಅಂಶ ಅಡಗಿದೆ ಎಂಬ ವರದಿ ತಪ್ಪು. ನಾವು ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿಯಾಗಿ ಅವರಿಗೆ ವಿವರಿಸಿದ್ದೇವೆ. ನಮ್ಮ ವಿವರಣೆಯನ್ನು ಒಪ್ಪಿಕೊಂಡಿರುವ ನಡ್ಡಾ ಅವರು ಅಡಕೆಯಿಂದ ಹಾನಿಯಿಲ್ಲ ಎಂಬ ಬಗ್ಗೆ ಕೇಂದ್ರ ಶೀಘ್ರವೇ ಪ್ರಕಟಣೆ ಹೊರಡಿಸುವ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಹೇಳಿಕೆ ರಾಜ್ಯದ ಲಕ್ಷಾಂತರ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಅಡಕೆಯನ್ನು ಪುರಾತನ ಕಾಲದಿಂದಲು ಬಳಕೆ ಮಾಡಲಾಗುತ್ತಿದ್ದು ಇದರಲ್ಲಿ ಆರೋಗ್ಯಕ್ಕೆ ಪೂರಕ ಅಂಶಗಳಿವೆ ಎಂದು ನಡ್ಡಾ ಅವರಿಗೆ ತಿಳಿಸಿದ್ದಾಗಿ ಹೇಳಿದರು.

ಇದೇ ವೇಳೆ ರಾಜ್ಯದ ‘ತಳವಾರ’ ಮತ್ತು ‘ಪರಿವಾರ’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೇವೆ ಎಂದರು.

loader