ಈಗಿನ ಮಟ್ಟಿಗೆ ನಾನು ರಾಜಕೀಯ ಪ್ರವೇಶಿಸಬೇಕೆಂಬ ಒತ್ತಡ ಇಲ್ಲ. ಮುಂದಿನ ತಿಂಗಳು 12ರಂದು ನನ್ನ ಜನ್ಮದಿನವಿದೆ. ಇದಾದ ನಂತರ ನಾನು ಅಭಿಮಾನಿಗಳನ್ನು ಭೇಟಿಯಾಗುವೆ' ಎಂದು ಅವರು ತಿಳಿಸಿದ್ದಾರೆ.
ಚೆನ್ನೈ(ನ.23): ಇನ್ನೇನು ರಾಜಕೀಯಕ್ಕೆ ಧುಮುಕೇ ಬಿಡುತ್ತೇನೆ ಎನ್ನುವಷ್ಟು ಹವಾ ಎಬ್ಬಿಸಿದ್ದ ರಜನೀ ಕಾಂತ್ ಈಗ ವರಸೆ ಬದಲಿಸಿದ್ದಾರೆ.
`ಸದ್ಯಕ್ಕಂತೂ ರಾಜಕೀಯ ಪ್ರವೇಶಿಸುವುದಿಲ್ಲ' ಎಂದು ಹೇಳಿದ್ದಾರೆ.ಚೆನ್ನೈನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರಜನಿ `ಈಗಿನ ಮಟ್ಟಿಗೆ ನಾನು ರಾಜಕೀಯ ಪ್ರವೇಶಿಸಬೇಕೆಂಬ ಒತ್ತಡ ಇಲ್ಲ. ಮುಂದಿನ ತಿಂಗಳು 12ರಂದು ನನ್ನ ಜನ್ಮದಿನವಿದೆ. ಇದಾದ ನಂತರ ನಾನು ಅಭಿಮಾನಿಗಳನ್ನು ಭೇಟಿಯಾಗುವೆ' ಎಂದು ಅವರು ತಿಳಿಸಿದ್ದಾರೆ.
