ಬಿಳಿಯರ ಪ್ರಾಬಲ್ಯವೆಂಬುದು ನಮ್ಮ ಸಂಸ್ಕೃತಿಯಲ್ಲ! ಅಮೆರಿಕ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ಅಭಿಮತ! ನವನಾಝಿವಾದಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ! ವರ್ಣಭೇದ ನೀತಿ ಅಮೆರಿಕದ ಗುರುತಲ್ಲ ಎಂದ ಇವಾಂಕಾ

ವಾಷಿಂಗ್ಟನ್(ಆ.12): ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಶ್ವೇತಭವನದ ಸಲಹೆಗಾರ್ತಿ ಇವಾಂಕಾ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ವರ್ಜೀನಿಯಾದ ಚಾರ್ಲೊಟ್ಸವಿಲ್ ನಲ್ಲಿ ಬಿಳಿಯರ ಪ್ರಾಬಲ್ಯ ಪ್ರತಿಪಾದಕರು ನಡೆಸಿದ ಸಮಾವೇಶದಿಂದಾಗಿ ನಡೆದ ಅರಾಜಕತೆಯ ಮೊದಲ ವಾರ್ಷಿಕೋತ್ಸವ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ಇವಾಂಕಾ ಟ್ರಂಪ್ ಟ್ವೀಟ್ ಮಾಡಿದ್ದು, ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.

Scroll to load tweet…

ಒಂದು ವರ್ಷದ ಹಿಂದೆ ಚಾರ್ಲೊಟ್ಸವಿಲ್ ನಲ್ಲಿ ದ್ವೇಷ, ವರ್ಣಭೇದ ನೀತಿ, ಧಾರ್ಮಿಕ ಅಂಧಃಶ್ರದ್ಧೆ ಮತ್ತು ಹಿಂಸಾಚಾರದ ಘಟನೆ ನಡೆದಿತ್ತು. ಅಮೆರಿಕನ್ನರು ಸ್ವಾತಂತ್ರ್ಯ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವೈವಿಧ್ಯಮಯ ಅಭಿಪ್ರಾಯವನ್ನು ಸಂರಕ್ಷಿಸುತ್ತಾ ಬಂದಿದ್ದಾರೆ. ಈ ದೇಶದಲ್ಲಿ ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅವಕಾಶವಿಲ್ಲ ಎಂದು ಇವಾಂಕಾ ಟ್ವೀಟ್ ಮಾಡಿದ್ದಾರೆ.

Scroll to load tweet…

‘ದ್ವೇಷ, ವರ್ಣಭೇದ ನೀತಿ ಮತ್ತು ಹಿಂಸೆಯ ಮೂಲಕ ಎಲ್ಲರೂ ಕಣ್ಣೀರಿಡುವಂತೆ ಮಾಡುವ ಬದಲು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ನೆರವಾಗುವ ಮೂಲಕ ಸಮುದಾಯವನ್ನು ಬಲಗೊಳಿಸೋಣ’ಎಂದು ಸಲಹೆ ನೀಡಿದ್ದಾರೆ. ಇನ್ನು ಚಾರ್ಲೊಟ್ಸವಿಲ್ ನಂಥದ್ದೇ ಸಮಾವೇಶವನ್ನು ಶ್ವೇತಭವನದ ಹೊರಗೆ ಹಮ್ಮಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇವಾಂಕಾ ಹೇಳಿಕೆ ಮಹತ್ವ ಪಡೆದಿದೆ.

Scroll to load tweet…