ಬೆಂಗಳೂರು[ಅ. 10]  ವಿಧಾನಸಭಾ ಕಲಾಪವನ್ನು ಚಿತ್ರೀಕರಿಸುವ ಸಂಬಂಧ ಖಾಸಗಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರ ಭಾಗಶಃ ನಿರ್ಬಂಧ ಹಾಕಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶದನ್ವಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಇಂದು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿಯೂ ಮಾತುಕತೆ ಆರಂಭವಾಗಿದೆ.

ಅ. 10 ಗುರುವಾರ ಆರಂಭವಾಗಲಿರುವ ಕಲಾಪವನ್ನು ದೂರದರ್ಶನ ಚಿತ್ರೀಕರಣ ಮಾಡುತ್ತದೆ.  ಖಾಸಗಿ ಮಾಧ್ಯಮಗಳು ದೂರದರ್ಶನ ನೀಡುವ ವಿಡಿಯೋ ಬಳಸಿಕೊಂಡು ವರದಿ ಮಾಡಬೇಕು. ಖಾಸಗಿ  ವಾಹಿನಿಯ ಕ್ಯಾಮೆರಾಮೆನ್ ಮತ್ತು ಫೋಟೋಗ್ರಾಫರ್​ಗಳಿಗೆ ಪ್ರವೇಶ ಇಲ್ಲ. ಮುದ್ರಣ ಮಾಧ್ಯಮಗಳು ವಾರ್ತಾ ಇಲಾಖೆಯಿಂದ ಪೋಟೋ ಪಡೆದುಕೊಳ್ಳಬಹುದು.

ರೇಸ್ ನಲ್ಲಿ ಎಲ್ಲರನ್ನು ಸಿದ್ದರಾಮಯ್ಯ ಹಿಂದೆ ಹಾಕಿದ್ದು ಹೇಗೆ?

ಸಿಎಂ ಬಿಎಸ್ ಯಡಿಯೂರಪ್ಪ ಸಹ ಮಾಧ್ಯಮಗಳ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಸ್ಪೀಕರ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ವಿಧಾನಸಭೆ ಕಲಾಪಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುವ ಪ್ರಸ್ತಾವನೆ ಇಟ್ಟು ಟೀಕೆಗೆ ಗುರಿಯಾಗಿತ್ತು. ಇದಾದ ಮೇಲೆ ಕುಮಾರಸ್ವಾಮಿ ಸಿಎಂ ಆದಾಗ ಮಾಧ್ಯಮಗಳ ಪ್ರತಿನಿಧಿಗಳಿಗೆ ವಿಧಾನಸೌಧ  ಪ್ರವೇಶಕ್ಕೆ ನಿರ್ಬಂಧ ಹೇರುವ ಮಾತು ಕೇಳಿಬಂದಿತ್ತು.