ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ (ಎಐಪಿಡಿಎ) ನಾಳೆ ಕರೆ ನೀಡಿದ್ದ ಬಂದ್ ಅನ್ನು ವಾಪಸ್ ತೆಗೆದುಕೊಂಡಿದೆ. ನಾಳೆ ಎಂದಿನಂತೆ ಪೆಟ್ರೋಲ್ ಮತ್ತು ಡಿಸೇಲ್ ದೇಶಾದ್ಯಂತ ಲಭ್ಯವಿರಲಿದೆ.

ಬೆಂಗಳೂರು (ಜು.11): ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ (ಎಐಪಿಡಿಎ) ನಾಳೆ ಕರೆ ನೀಡಿದ್ದ ಬಂದ್ ಅನ್ನು ವಾಪಸ್ ತೆಗೆದುಕೊಂಡಿದೆ. ನಾಳೆ ಎಂದಿನಂತೆ ಪೆಟ್ರೋಲ್ ಮತ್ತು ಡಿಸೇಲ್ ದೇಶಾದ್ಯಂತ ಲಭ್ಯವಿರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಜೊತೆ ಮಾತುಕತೆ ನಡೆಸದೇ ಪ್ರತಿದಿನ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪರಿಷ್ಕರಣೆ ಮಾಡಬೇಕೆಂದು ಸರ್ಕಾರ ಆದೇಶಿಸಿತ್ತು. ಇದನ್ನು ಖಂಡಿಸಿ ನಾಳೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಕೇಂದ್ರೀಯ ಪೆಟ್ರೋಲಿಯಂ ಸಚಿವ ಹಾಗೂ ಸರ್ಕಾರಿ ಸ್ವಾಮ್ಯದ 3 ತೈಲ ಕಂಪನಿಗಳು ಎಐಪಿಡಿಎ ಗೆ ಪ್ರತಿಕ್ರಿಯಿಸಿವೆ. ಈ ತಿಂಗಳಾಂತ್ಯದೊಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಪೆಟ್ರೋಲಿಯಂ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಬಂದ್ ವಾಪಸ್ ತೆಗೆದುಕೊಳ್ಳಲು ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ ನಿರ್ಧರಿಸಿದೆ.

ಬಂದನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಒಂದು ವೇಳೆ ಪೆಟ್ರೋಲಿಯಂ ಸಚಿವರು ಭರವಸೆಯನ್ನು ಈಡೇರಿಸದಿದ್ದರೆ ತಿಂಗಳಾಂತ್ಯದಲ್ಲಿ ಬಂದ್ ನಡೆಸುತ್ತೇವೆಂದು ಎಐಪಿಡಿಎ ಹೇಳಿದೆ.