Asianet Suvarna News Asianet Suvarna News

ಸಾಗರಕ್ಕೆ ಬಂದಿಲ್ಲವಂತೆ ನಿಪಾ ವೈರಸ್, ರಾಜ್ಯದ ಜನತೆ ನಿರಾಳ

ಮಲೆನಾಡಿನ ಸಾಗರದಲ್ಲಿ ಆತಂಕ ಮೂಡಿಸಿದ್ದ ಮಾರಣಾಂತಿಕ ನಿಪಾ ವೈರಸ್ (ಬಾವಲಿ ಜ್ವರ) ಭೀತಿಗೆ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 

No Nipah Virus infection in Sagar

ಶಿವಮೊಗ್ಗ : ಮಲೆನಾಡಿನ ಸಾಗರದಲ್ಲಿ ಆತಂಕ ಮೂಡಿಸಿದ್ದ ಮಾರಣಾಂತಿಕ ನಿಪಾ ವೈರಸ್ (ಬಾವಲಿ ಜ್ವರ) ಭೀತಿಗೆ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 

 ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಪತ್ತೆಯಾಗಿದ್ದ ಶಂಕಿತ ಪ್ರಕರಣವು ಇದೀಗ ನೆಗೆಟಿವ್ ಎಂದು ಖಚಿತವಾಗಿದೆ.  ತೀವ್ರ ಜ್ವರದಿಂದ ವ್ಯಕ್ತಿಯೋರ್ವ ಬಳಲುತ್ತಿದ್ದು,  ನಿಪಾ ತಗುಲಿರುವ ಶಂಕೆ ಎದುರಾಗಿತ್ತು. 

ಆದರೆ ಅವರ ರಕ್ತ ಪರೀಕ್ಷೆಯ ವರದಿ ಇದೀಗ  ಬಂದಿದ್ದು, ಅವರಲ್ಲಿ ನಿಪಾ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.  ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಸಾಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ತೀವ್ರ ನಿಗಾ ವಹಿಸಲಾಗಿತ್ತು. ಆದರೆ ಇದೀಗ ನೆಗೆಟಿವ್ ಎಂದು ಸಾಬೀತಾಗಿದ್ದು, ಆತಂಕ ದೂರವಾಗಿದೆ.

ಇನ್ನು ಕೇರಳದ ಗಡಿ ಜಿಲ್ಲೆಗಳಲ್ಲಿ ಈ ಸಂಬಂಧ ಈಗಾಗಲೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದ್ದು, ಬರುವ ಹೋಗುವವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ. 

ಈಗಾಗಲೇ ಕೇರಳ ರಾಜ್ಯದಲ್ಲಿ ನಿಫಾ ಮರಣ ಮೃದಂಗ ಬಾರಿಸುತ್ತಿದ್ದು, ಗುರುವಾರ ಮತ್ತೊಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.  ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ.  

Follow Us:
Download App:
  • android
  • ios