ನವದೆಹಲಿ[ಜು.19]: ಬಡಜನರಿಗಾಗಿಯೇ ಆರಂಭಿಸಿದ್ದ ಗರೀಬ್‌ ರಥ ರೈಲಿಗೆ ಹೊಸ ಬೋಗಿಗಳ ಜೋಡಣೆಯನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಸೂಚಿಸಿದೆ.

ಇದರಿಂದ ಕಾಲಕ್ರಮೇಣ ತನ್ನ ಸಂಚಾರ ಸ್ಥಗಿತಗೊಳಿಸಿ, ಈ ರೈಲು ಇತಿಹಾಸದ ಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಈ ರೈಲುಗಳನ್ನು ಸಾಮಾನ್ಯ ಮೇಲ್‌ ಇಲ್ಲವೇ ಎಕ್ಸ್‌ಪ್ರೆಸ್‌ ರೈಲುಗಳಾಗಿ ಪರಿವರ್ತಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗರೀಬ್‌ ರಥ ರೈಲು ತೀರಾ ಹಳೆಯದಾಗಿದ್ದು ಇವುಗಳ ನಿರ್ವಹಣೆಯೂ ತ್ರಾಸದಾಯಕ. ಅಲ್ಲದೇ, ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ದುರಸ್ಥಿ ಮಾಡಲು ಹೆಚ್ಚಿನ ಹಣ ವ್ಯಯವಾಗುತ್ತದೆ. ಇದರಿಂದ ಸರ್ಕಾರ ಈ ರೈಲಿಗೆ ಹೊಸ ಬೋಗಿಗಳ ಜೋಡಣೆ ನಿಲ್ಲಿಸುವಂತೆ ಸೂಚಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.