ಮಧ್ಯರಾತ್ರಿಯಿಂದಲೇ ಹಣ ಸಿಗಬೇಕಿತ್ತಾದರೂ ಹಣ ಸಿಗಲಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ಕೆಲವೆಡೆ ಹಣ ತುಂಬಿಸಲಾಗಿದೆ. ಇದಷ್ಟೇ ಅಲ್ಲ, ಎಟಿಎಂಗಳಲ್ಲಿ ಹೊಸ 500 ಮತ್ತು 2000 ರೂ. ನೋಟುಗಳು ಬರುತ್ತಿಲ್ಲ.
ಬೆಂಗಳೂರು(ನ.11): 500 ಮತ್ತು 1000 ರೂ. ನೋಟುಗಳನ್ನ ರದ್ದು ಮಾಡಿ ಪ್ರಧಾನಮಂತ್ರಿ ನರೇಂದ್ರಮೋದಿ ಆದೇಶ ಹೊರಡಿಸಿದ್ಧಾರೆ. ಹಳೆ ನೋಟಿಗೆ ಬದಲಾಗಿ ಹೊಸ ನೋಟುಗಳನ್ನ ಬ್ಯಾಂಕ್`ಗಳಲ್ಲಿ ಮಿತವಾಗಿ ವಿತರಿಸಲಾಗುತ್ತಿದೆ. ಆದರೆ, ಇಂದಿನಿಂದ ಎಟಿಂಎಂಗಲ್ಲೂ ಹಣ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಬೆಂಗಳೂರು ನಗರದಲ್ಲೇ ಬೆರಳೆಣಿಕೆಯಷ್ಟು ಎಟಿಎಂಗಳಲ್ಲಿ ಮಾತ್ರ ಹಣ ಸಿಗುತ್ತಿದೆ.
ಮಧ್ಯರಾತ್ರಿಯಿಂದಲೇ ಹಣ ಸಿಗಬೇಕಿತ್ತಾದರೂ ಹಣ ಸಿಗಲಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ಕೆಲವೆಡೆ ಹಣ ತುಂಬಿಸಲಾಗಿದೆ. ಇದಷ್ಟೇ ಅಲ್ಲ, ಎಟಿಎಂಗಳಲ್ಲಿ ಹೊಸ 500 ಮತ್ತು 2000 ರೂ. ನೋಟುಗಳು ಬರುತ್ತಿಲ್ಲ.