ಮಾಂಸದ ಊಟವಿಲ್ಲ ಎಂಬ ಕಾರಣಕ್ಕೆ ಬೀಗರು ಊಟ ಮಾಡಲು ನಿರಾಕರಿಸಿರುವ ಘಟನೆ ಬರೇಲಿ ಬಳಿ ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಅಕ್ರಮ ಗೋವಧೆ ಕೇಂದ್ರಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ಬಂದ್ ಮಾಡಿದೆ. ಇದರಿಂದಾಗಿ ಹಬ್ಬ ಮತ್ತು ಮದುವೆ ಸಮಾರಂಭಗಳಲ್ಲಿ ಮಾಂಸಾಹಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಂಸದ ಊಟವಿಲ್ಲ ಎಂಬ ಕಾರಣಕ್ಕೆ ಬೀಗರು ಊಟ ಮಾಡಲು ನಿರಾಕರಿಸಿರುವ ಘಟನೆ ಬರೇಲಿ ಬಳಿ ವರದಿಯಾಗಿದೆ. ಹಮೀದ್ ಅಲಿ ಅನ್ಸಾರಿ ಎಂಬುವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸದ ಅಂಗಡಿ ಬಂದ್ ಆದ ಕಾರಣ ಮತ್ತು ಕುರಿ, ಕೋಳಿಗಳ ಮಾಂಸ ಗಗನಕ್ಕೇರಿದ್ದ ಪರಿಣಾಮ ಮಾಂಸದ ಅಡುಗೆ ಮಾಡಿಸುವಲ್ಲಿ ಮಾತ್ರ ವಿಫಲರಾಗಿದ್ದರು. ಹಾಗಾಗಿ ಸಿಟ್ಟಿಗೆದ್ದ ಬೀಗರು ನಾವು ಬರೀ ಸಸ್ಯಾಹಾರ ಸೇವಿಸಲ್ಲ ಎಂದು ಹೊರಟೇ ಬಿಟ್ರು!
