ಭಾರತೀಯ ಸೇನಾ ಪಡೆಗಳಲ್ಲಿ ಮೃತರಾದ ಯಾವುದೇ ಸಿಬ್ಬಂದಿಗೆ ‘ಹುತಾತ್ಮ’ ಪದ ಬಳಕೆ ಮಾಡುವುದಿಲ್ಲ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ನವದೆಹಲಿ(ಡಿ.6): ಸೇವೆಯಲ್ಲಿ ಸಾವಿಗೀಡಾಗುವ ಭದ್ರತಾ ಸಿಬ್ಬಂದಿಯನ್ನು ಹುತಾತ್ಮ ಎಂಬುದಾಗಿ ಸರ್ಕಾರ ಘೋಷಿಸುವುದಿಲ್ಲ ಎಂದು ಗೃಹ ಖಾತೆಯ ಸಹಾಯಕ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಲೋಕಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಭಾರತೀಯ ಸೇನಾ ಪಡೆಗಳಲ್ಲಿ ಮೃತರಾದ ಯಾವುದೇ ಸಿಬ್ಬಂದಿಗೆ ‘ಹುತಾತ್ಮ’ ಪದ ಬಳಕೆ ಮಾಡುವುದಿಲ್ಲ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಅದೇ ರೀತಿ, ಯಾವುದೇ ಕಾರ್ಯಾಚರಣೆಯಲ್ಲಿ ಸಾವಿಗೀಡಾಗುವ ಸಿಎಪಿಎಫ್ ಮತ್ತು ಅಸ್ಸಾಂ ರೈಲ್ಸ್ ಸಿಬ್ಬಂದಿಗೂ ಅಂಥ ಪದ ಬಳಕೆ ಮಾಡಲಾಗುವುದಿಲ್ಲ. ಆದರೆ ಮೃತರ ಹತ್ತಿರದ ಬಂಧುಗಳು ಅಥವಾ ಕುಟುಂಬಕ್ಕೆ ಕಾನೂನಿನನ್ವಯ ದೊರೆಯುವ ಪಿಂಚಣಿ ಸೌಲಭ್ಯ ಹಾಗೂ ಹೆಚ್ಚುವರಿ ಪರಿಹಾರ ನೀಡಲಾಗುತ್ತದೆ ಎಂದು ರಿಜಿಜು ಹೇಳಿದ್ದಾರೆ.
