35 ವರ್ಷದೊಳಗಿನವರಿಗೆ ಕಾಂಗ್ರೆಸ್ ಭರ್ಜರಿ ಆಫರ್

First Published 28, Jul 2018, 10:55 AM IST
No income tax for all under 35 Congress Loksabha Election Manifesto
Highlights

35 ವರ್ಷ ವಯಸ್ಸಿನ ಒಳಗಿನವರಿಗೆ ಕಾಂಗ್ರೆಸ್ ಇದೀಗ ಭರ್ಜರಿ ಆಫರ್ ಒಂದನ್ನು ನೀಡಲು ಸಜ್ಜಾಗಿದೆ. ಇದರಲ್ಲಿ ೩೫ ವರ್ಷ ಒಳಗಿನವರನ್ನು ತೆರಿಗೆಯಿಂದ ಹೊರಗಿಡಲು ಪ್ಲಾನ್ ಮಾಡಿದೆ. 


ನವದೆಹಲಿ: 2019 ರ ಮಹಾಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಶತಾಯ ಗತಾಯ ಯತ್ನ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಯುವ ಮತದಾರರನ್ನು ಒಲಿಸಿಕೊಳ್ಳಲು ಹೊಸ ದಾಳ ಉರುಳಿಸಲು ಸಜ್ಜಾಗಿದೆ. ತಾನು ಅಧಿಕಾರಕ್ಕೆ ಬಂದರೆ 35 ವರ್ಷ ವಯಸ್ಸಿನವರೆಗಿನ ವ್ಯಕ್ತಿಗಳಿಗೆ ತೆರಿಗೆ ಹಾಕುವುದಿಲ್ಲ ಎಂಬ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲು ಅದು ಚಿಂತನೆ ನಡೆಸಿದೆ.

ಜುಲೈ 13 ರಂದು ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಕೂಡ ಇದ್ದರು ಎಂದು ಮೂಲಗಳು ಹೇಳಿವೆ. 2019 ರ ಲೋಕಸಭೆ ಚುನಾವಣೆಯಲ್ಲಿ ಸುಮಾರು ೧.೫ ಕೋಟಿ ಮತದಾರರು 35  ವರ್ಷದ ಒಳಗಿನವರಾಗಿರಲಿದ್ದು, ದೇಶದ ಜನಸಂಖ್ಯೆಯಲ್ಲಿ 2/ 3 ನೇ ಪಾಲು ಹೊಂದಿರುತ್ತಾರೆ.

ಇವರನ್ನು ಈ ರೀತಿಯ ಕ್ರಮಗಳಿಂದ ಆಕರ್ಷಿಸಬಹುದು. ಹೊಸ ಉದ್ಯೋಗಾವಕಾಶ, ಉದ್ದಿಮೆಗಳ ಸ್ಥಾಪನೆಗೆ ನೆರವಾಗಬಹುದು ಎಂದು ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಎಂದು ಆನ್‌ಲೈನ್ ಮಾಧ್ಯಮವೊಂದು ವರದಿ ಮಾಡಿದೆ. ಪ್ರಣಾಳಿಕೆ ಸಮಿತಿ ನೇತೃತ್ವವನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ವಹಿಸಿಕೊಂಡಿದ್ದು, ಅವರು ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

loader