1, 2 ನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ!

No Homework For Students Of Classes 1, 2:  Madras High Court
Highlights

ಸಿಬಿಎಸ್‌ಇ ಸಿಲಬಸ್‌ನಲ್ಲಿ ಅಧ್ಯಯನ ಮಾಡುತ್ತಿರುವ 1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೋಂ ವರ್ಕ್ ನೀಡುವುದಕ್ಕೆ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿದೆ. 

ಚೆನ್ನೈ (ಮೇ. 31): ಸಿಬಿಎಸ್‌ಇ ಸಿಲಬಸ್‌ನಲ್ಲಿ ಅಧ್ಯಯನ ಮಾಡುತ್ತಿರುವ 1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೋಂ ವರ್ಕ್ ನೀಡುವುದಕ್ಕೆ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿದೆ. 

ಈ ಆದೇಶ ಪಾಲನೆಯಾಗುತ್ತಿದ್ದೆಯೇ ಎಂಬ ಬಗ್ಗೆ ಪರಿಶೀಲನೆಗಾಗಿ ಸಂಚಾರಿ ದಳ ನೇಮಿಸುವಂತೆಯೂ ಸಿಬಿಎಸ್‌ಇಗೆ ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಯುವ ವಿದ್ಯಾರ್ಥಿಗಳ ಹೊತ್ತೊಯ್ಯುವ ಭಾರೀ ತೂಕದ ಬ್ಯಾಗ್ ಬಗ್ಗೆಯೂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಅಗತ್ಯವಿಲ್ಲದ ಪುಸ್ತಕಗಳ ಬಳಕೆ ನಿಲ್ಲಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು. ಅಲ್ಲದೆ, ಈ ಬಗ್ಗೆ 4 ವಾರಗಳಲ್ಲಿ ತನಗೆ ವರದಿ ಸಲ್ಲಿಸಲು ಸೂಚಿಸಿದೆ. 

loader