ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಪ್ರಸಿದ್ಧ ಲಡ್ಡುಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ.

ನವದೆಹಲಿ: ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಪ್ರಸಿದ್ಧ ಲಡ್ಡುಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ.

ಈ ಕುರಿತು ಟಿಟಿಡಿ ಮಾಡಿದ್ದ ಮನವಿಯನ್ನು ಕೇಂದ್ರ ಜಿಎಸ್‌ಟಿ ಮಂಡಳಿ ಮಾನ್ಯ ಮಾಡಿದೆ. ಟಿಟಿಡಿ ಮಂಡಳಿ ಲಡ್ಡುಗೆ ಬಳಸುವ ವಸ್ತುಗಳು, ಪೂಜೆಗೆ ಮತ್ತು ಯಾತ್ರಿಕರಿಗೆ ನೀಡುವ ವಸ್ತುಗಳು, ಮುಡಿ ನೀಡಿದ ಕೂದಲಿನ ಹರಾಜು ಮತ್ತು ಇತರೆ ಆದಾಯಗಳಿಗೆ ವಿನಾಯ್ತಿ ನೀಡಬೇಕೆಂದು ಕೋರಿತ್ತು.

ಆದರೆ ಈ ಪೈಕಿ ಲಡ್ಡು, ಮುಡಿ ಕೂದಲು ಮತ್ತು ತಿರುಮಲದಲ್ಲಿನ 1000 ರು.ಗಿಂತ ಕಡಿಮೆ ಬಾಡಿಗೆ ಯಾತ್ರಿಕರ ನಿವಾಸಕ್ಕೆ ವಿನಾಯ್ತಿ ನೀಡಲು ಜಿಎಸ್‌ಟಿ ಮಂಡಳಿ ಒಪ್ಪಿದೆ.