ನಮ್ಮ ಕುಟುಂಬದಲ್ಲಿ ಅಥವಾ ಪಕ್ಷದಲ್ಲಿ ಯಾವುದೇ ಕಲಹಗಳಿಲ್ಲ; ನಾನು ನಾಳೆಯಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದೇನೆ, ರಾಜ್ಯದ ಮುಂದಿನ ಮುಖ್ಯಮಂತ್ರಿ ಅಖಿಲೇಶ್ ಅವರೇ ಆಗುತ್ತಾರೆ ಎಂದು ಮುಲಾಯಂ ಹೇಳಿದ್ದಾರೆ.

ಲಕ್ನೋ (ಫೆ.06): ಚುನಾವಣಾ ದಿನ ಸಮೀಸುತ್ತಿದ್ದಂತೆ ತಮ್ಮ ಕುಟುಂಬ ಹಾಗೂ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಮೌನ ಮುರಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಕುಟುಂಬದಲ್ಲಿ ಅಥವಾ ಪಕ್ಷದಲ್ಲಿ ಯಾವುದೇ ಕಲಹಗಳಿಲ್ಲ; ನಾನು ನಾಳೆಯಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದೇನೆ, ರಾಜ್ಯದ ಮುಂದಿನ ಮುಖ್ಯಮಂತ್ರಿ ಅಖಿಲೇಶ್ ಅವರೇ ಆಗುತ್ತಾರೆ ಎಂದು ಮುಲಾಯಂ ಹೇಳಿದ್ದಾರೆ.

ಪಕ್ಷದ ಬಗ್ಗೆ ಅಮರ್ ಸಿಂಗ್ ಅವರಿಗೂ ಯಾವುದೇ ಮುನಿಸಿಲ್ಲ, ಅಖಿಲೇಶ್’ಗೆ ಕೆಲಸ ಮಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿರುವ ಮುಲಾಯಂ, ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ಪರವಾಗಿ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಫೆ.11ರಂದು ಉತ್ತರ ಪ್ರದೇಶ ವಿಧಾನಸಭೆಗೆ ಮೊದಲ ಹಂತದ ಮತದಾನಗಳು ನಡೆಯಲಿವೆ.