ಕೇಂದ್ರ ಸರ್ಕಾರದ ಬದಲಾದ ಆದೇಶದೊಂದಿಗೆ ಶುಕ್ರವಾರದಿಂದ 1,000 ರೂ ನೋಟು ಚಲಾವಣೆ ವಾಸ್ತವವಾಗಿ ರದ್ದಾಗಿದೆ. ಗುರುವಾರ ದೇಶದ ನಾನಾ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ಅವರ ಅಭಿಪ್ರಾಯಗಳನ್ನು ತೆಗೆದುಕೊಂಡು, ಇನ್ನು ಮುಂದೆ ನೋಟು ವಿನಿಮಯ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನವದೆಹಲಿ(ನ.24): ಕೇಂದ್ರ ಸರ್ಕಾರ ನೋಟು ಚಲಾವಣೆ ರದ್ದು ಮಾಡಿದ ನಂತರ ಒದಗಿಸಿದ್ದ ಹಳೆ ನೋಟು ಬದಲಾವಣೆ ಅವಕಾಶ ಗುರುವಾರ ರಾತ್ರಿಗೆ ಅಂತ್ಯಗೊಂಡಿದೆ. ಶುಕ್ರವಾರದಿಂದ(ನ.25) ಹಳೆ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮಾತ್ರ ಅವಕಾಶ ನೀಡಿದೆ. ಜತೆಗೆ ತುರ್ತು ಸೇವೆಗಳಿಗೆ ಹಳೇ ನೋಟುಗಳನ್ನು ಬಳಸಿಕೊಳ್ಳಲು ಇದ್ದ ಅವಕಾಶವನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿದೆ. ಆದರೆ, ಇನ್ನು ಮುಂದೆ 500 ರೂ. ನೋಟುಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
ಇನ್ನು ಮುಂದೆ ತುರ್ತು ಸೇವೆಗಳಲ್ಲಿ 1,000 ರೂ ನೋಟುಗಳನ್ನು ಸ್ವೀಕರಿಸುವುದಿಲ್ಲ.1,000 ರೂ ನೋಟುಗಳನ್ನು ಹೊಂದಿರುವವರು ಬ್ಯಾಂಕಿನಲ್ಲಿ ತಮ್ಮ ಖಾತೆಗೆ ಠೇವಣಿ ಇಡಬೇಕು. ಒಂದು ವೇಳೆ ಬ್ಯಾಂಕ್ ಖಾತೆಯೇ ಇಲ್ಲದವರು ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಹಳೆ ನೋಟುಗಳನ್ನು ಠೇವಣಿ ಇಡಬಹುದು ಎಂದು ಹಣಕಾಸು ಇಲಾಖೆ ಗುರುವಾರ ಸಂಜೆ ಹೊರಡಿಸಿದ ಹೊಸ ಆದೇಶದಲ್ಲಿ ಹೇಳಿದೆ.
ಕೇಂದ್ರ ಸರ್ಕಾರದ ಬದಲಾದ ಆದೇಶದೊಂದಿಗೆ ಶುಕ್ರವಾರದಿಂದ 1,000 ರೂ ನೋಟು ಚಲಾವಣೆ ವಾಸ್ತವವಾಗಿ ರದ್ದಾಗಿದೆ. ಗುರುವಾರ ದೇಶದ ನಾನಾ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ಅವರ ಅಭಿಪ್ರಾಯಗಳನ್ನು ತೆಗೆದುಕೊಂಡು, ಇನ್ನು ಮುಂದೆ ನೋಟು ವಿನಿಮಯ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬ್ಯಾಂಕುಗಳಲ್ಲಿ ನೋಟು ಬದಲಾವಣೆ ಕೌಂಟರ್‌ಗಳಲ್ಲಿ ಜನರ ಸಂಖ್ಯೆ ಇಳಿಮುಖವಾದ್ದರಿಂದ ನೋಟು ಬದಲಾವಣೆ ಸೌಲಭ್ಯ ವಿಸ್ತರಿಸದಿರಲು ನಿರ್ಧರಿಸಲಾಗಿದೆ. ಕೇಂದ್ರದ ಹೊಸ ನಿರ್ಧಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್, ಸರ್ಕಾರ ಜನರ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಕೈಗೊಂಡ ಪ್ರಮುಖ ನಿರ್ಧಾರ ಮತ್ತು ಮಾರ್ಪಾಡುಗಳು.
- ತುರ್ತು ಸೇವೆಗಳಿಗೆ 500 ರೂ ನೋಟುಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
- ಕೇಂದ್ರ, ರಾಜ್ಯ ಮತ್ತು ಮುನಿಸಿಪಾಲಿಟಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿ 2000 ರೂ. ರವರೆಗೆ ಶುಲ್ಕ ಪಾವತಿಸಬಹುದು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾಲೇಜುಗಳ ಶುಲ್ಕ ಪಾವತಿಸಬಹುದು.
- ಪ್ರಿಪೇಯ್ಡ್ ಮೊಬೈಲ್ ಟಾಪ್ ಗರಿಷ್ಠ 500 ರೂ.ರವಗೆ ಪಾವತಿ.
- ಗ್ರಾಹಕರ ಸಹಕಾರ ಮಳಿಗೆಗಳಲ್ಲಿ 5000 ರೂ ಮೊತ್ತದ ಖರೀದಿ ಮಾಡಬಹುದು.
- ವಿದ್ಯುತ್ ಮತ್ತು ನೀರಿನ ಶುಲ್ಕ ಹಳೆಬಾಕಿ ಪಾವತಿಸಬಹುದು. ಆದರೆ ಇದು ವೈಯಕ್ತಿಕ ಅಥವಾ ಗೃಹಪಯೋಗಿಗೆ ಮಾತ್ರ ಲಭ್ಯ
- ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ರಹಿತ ಸಂಚಾರ ಡಿಸೆಂಬರ್ 2ರವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್3ರಿಂದ ಡಿಸೆಂಬರ್15ರವರೆಗೆ 500ರೂ ನೋಟು ಪಾವತಿಸಬಹುದು.
- ವಿದೇಶಿ ಪ್ರಜೆಗಳು ವಿದೇಶಿ ಕರೆನ್ಸಿಯನ್ನು 500ರೂ ನೋಟುಗಳನ್ನು ನೀಡಿ 5000 ರೂ ಮೌಲ್ಯದವರೆಗೆ ವಿನಿಮಯ ಮಾಡಿಕೊಳ್ಳಬಹುದು.
