ಸಮಾಜದಲ್ಲಿ ಮಹಿಳೆಯರಿಗೆ  ಪ್ರಾಧಾನ್ಯತೆ ಕಡಿಮೆ ಎನ್ನುವ ಮಾತಿದೆ. ಆದರೆ ಗದಗ ಜಿಲ್ಲೆ ಹಾಲಕೇರಿಯಲ್ಲಿ ಮಹಿಳೆಯರ ಜಾತ್ರೆಯೊಂದು ನಡೆಯುತ್ತದೆ. ಇಲ್ಲಿ ಮಹಿಳೆಯರಿಗಷ್ಟೇ  ವಿಶೇಷವಾದ ಪ್ರಾತಿನಿಧ್ಯ ಇರುತ್ತೆ. ಈ ಜಾತ್ರೆಯಲ್ಲಿ ಮಹಿಳೆಯರದ್ದೆ ಮೇಲುಗೈ. ಅದ್ಹೇಗೆ, ಯಾವುದು ಆ ಜಾತ್ರೆ  ಅಂತಿರಾ? ಇಲ್ಲಿದೆ ನೋಡಿ ವಿವರ

ಗದಗ(ಅ.02): ಸಮಾಜದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಕಡಿಮೆ ಎನ್ನುವ ಮಾತಿದೆ. ಆದರೆ ಗದಗ ಜಿಲ್ಲೆ ಹಾಲಕೇರಿಯಲ್ಲಿ ಮಹಿಳೆಯರ ಜಾತ್ರೆಯೊಂದು ನಡೆಯುತ್ತದೆ. ಇಲ್ಲಿ ಮಹಿಳೆಯರಿಗಷ್ಟೇ ವಿಶೇಷವಾದ ಪ್ರಾತಿನಿಧ್ಯ ಇರುತ್ತೆ. ಈ ಜಾತ್ರೆಯಲ್ಲಿ ಮಹಿಳೆಯರದ್ದೆ ಮೇಲುಗೈ. ಅದ್ಹೇಗೆ, ಯಾವುದು ಆ ಜಾತ್ರೆ ಅಂತಿರಾ? ಇಲ್ಲಿದೆ ನೋಡಿ ವಿವರ

ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೇರಿ ಗ್ರಾಮದಲ್ಲಿ ನಡೆಯುವ ಜಾತ್ರೇಲಿ ಮಹಿಳೆಯರಿಗೇನೆ ಪ್ರಾತಿನಿಧ್ಯ. ಈ ಜಾತ್ರೆಯಲ್ಲಿ ಮಹಿಳೆರದ್ದೇ ಮೇಲುಗೈ. ಮಹಿಳೆಯರೇ ಈ ಜಾತ್ರೆಯ ಕೇಂದ್ರ ಬಿಂದು. ಸಾಮಾನ್ಯವಾಗಿ ಯಾವುದೇ ಜಾತ್ರೆಗಳು ನಡೆದರೆ ಅಲ್ಲಿನ ಬಹುತೇಕ ಜವಬ್ದಾರಿಗಳು ಗಂಡಸರೇ ವಹಸಿಕೊಂಡಿರುತ್ತಾರೆ. ಆದರೆ ಗದಗ ಜಿಲ್ಲೆ ಹಾಲಕೇರಿಯಲ್ಲಿ ಶ್ರೀ ಅನ್ನದಾನೇಶ್ವರ ಮಠದ ಜಾತ್ರೆಯನ್ನ ಮಹಿಳೆಯರು ಮಾಡ್ತಾರೆ.ಇಲ್ಲಿ ಪುರುಷರಿಗೆ ಅವಕಾಶವೇ ಇರುವುದಿಲ್ಲ. ಸುಮಾರು ಒಂದು ವಾರಗಳ ಕಾಲ ನಡಿಯುವ ಈ ಜಾತ್ರೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.

ಇನ್ನೂ ಈ ಜಾತ್ರೇಲಿ ಈ ಬೆಳ್ಳಿ ರಥೋತ್ಸವ ನೆರವೇರುತ್ತದೆ . ಈ ಮಠದ ಬೆಳ್ಳಿರಥವನ್ನು ಪ್ರತಿ ವರ್ಷ ಮಹಿಳೆಯರೇ ಎಳೆದು ಸಂಭ್ರಮಿಸುತ್ತಾರೆ. ಗದಗ ಜಿಲ್ಲೆಯಲ್ಲಿ ನಡೆಯೋ ಈ ಜಾತ್ರೆ ಉತ್ತರ ಕರ್ನಾಟಕದಲ್ಲೇ ವಿಶೇಷ ಅನ್ನಬಹುದು. ಇನ್ನೂ ವಿಶೇಷ ಜಾತ್ರೆಗೆ ಸುತ್ತ ಮುತ್ತಲ ಗ್ರಾಮಗಳಿಂದಲೂ ಜನ ಬಂದು ಸಂಭ್ರಮಿಸಿದ್ರು.