ಈ ಹಿಂದೆ ಜಾರಿಯಲ್ಲಿದ್ದ ವಸಸಂಹಿತೆಯನ್ನೇ ಪಾಲಿಸಬೇಕು, ಸೀರೆ ಧರಿಸಿದ ಮಹಿಳೆಯರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದಿದೆ ಹೈಕೋರ್ಟ್
ತಿರುವನಂತಪುರ(ಡಿ.9): ಕೇರಳದ ಐತಿಹಾಸಿಕ ಪದ್ಮನಾಭಸ್ವಾಮಿ ಮಂದಿರ ಪ್ರವೇಶ ಬಯಸುವ ಮಹಿಳೆಯರೆಲ್ಲರೂ ಇನ್ನು ಮುಂದೆ ಸೀರೆಯನ್ನೇ ಧರಿಸಬೇಕು. ಚೂಡಿದಾರ ಧರಿಸಿ ಬರುವವರಿಗೆ ಮಂದಿರಕ್ಕೆ ಪ್ರವೇಶವಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಈ ಹಿಂದೆ ಜಾರಿಯಲ್ಲಿದ್ದ ವಸಸಂಹಿತೆಯನ್ನೇ ಪಾಲಿಸಬೇಕು, ಸೀರೆ ಧರಿಸಿದ ಮಹಿಳೆಯರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದಿದೆ ಹೈಕೋರ್ಟ್.
ಇತ್ತೀಚೆಗಷ್ಟೇ, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕೆ ಎನ್ ಸತೀಶ್ ಅವರು, ಚೂಡಿದಾರ್ ಧರಿಸಿಯೂ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ್ದರು. ಇದಕ್ಕೆ ಕೆಲವು ಭಕ್ತರು ಮತ್ತು ದೇವಸ್ಥಾನದ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ‘‘ದೇವಸ್ಥಾನದ ಕಾರ್ಯ ನಿರ್ವಾಹಕ ಕಚೇರಿ ಧಾರ್ಮಿಕ ಆಚರಣೆಗಳನ್ನು ಬದಲಾವಣೆ ಮಾಡುವ ಅಧಿಕಾರ ಹೊಂದಿಲ್ಲ,’’ ಎಂದು ಹೇಳಿದೆ.
