ಕಳೆದ ಜು. 1ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಜಿಎಸ್ಟಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಗಳು ಹಬ್ಬುತ್ತಿದ್ದು, ಅವುಗಳಿಗೆ ಸಾರ್ವಜನಿಕರು ಕಿವಿಕೊಡಬಾರದೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ನವದೆಹಲಿ: ಕಳೆದ ಜು. 1ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಜಿಎಸ್ಟಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಗಳು ಹಬ್ಬುತ್ತಿದ್ದು, ಅವುಗಳಿಗೆ ಸಾರ್ವಜನಿಕರು ಕಿವಿಕೊಡಬಾರದೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಜಿಎಸ್ಟಿಯಲ್ಲಿ ಹಿಂದೂ ದೇವಸ್ಥಾನ ಟ್ರಸ್ಟ್’ಗಳು ಜಿಎಸ್ಟಿ ಪಾವತಿಸಬೇಕು, ಆದರೆ ಮಸೀದಿ ಹಾಗೂ ಚರ್ಚುಗಳಿಗೆ ಅದರಿಂದ ವಿನಮಾಯಿತಿ ನೀಡಲಾಗಿದೆ ಎಂದು ಸೊಶಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದ್ದು, ಅದು ಸಂಪೂರ್ಣವಾಗಿ ಸುಳ್ಳು ಮಾಹಿತಿಯಾಗಿದೆ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿದೆ.
ಜಿಎಸ್ಟಿ ಕಾನೂನಿನಲ್ಲಿ ಯಾವುದೇ ಧರ್ಮಾಧಾರಿತ ಅಂಶಗಳಿಲ್ಲ. ಅಂತಹ ಸಂದೇಶಗಳನ್ನು ಜನರು ಕಿವಿಗೊಒಡಬಾರದು ಹಾಗೂ ಹರಡಬಾರದು ಎಂದು ಮನವಿ ಮಾಡಲಾಗಿದೆ.
