ತಂದೆಯೊಂದಿಗೆ ಯಾವುದೇ ಭಿನಾಭಿಪ್ರಾಯವಿಲ್ಲ, ಅವರೊಂದಿಗೆ ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿರುವ ಅಖಿಲೇಶ್, ಮುಂದಿನ ಬಾರಿಯೂ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಲಕ್ನೋ (ಜ.17): ನಿನ್ನೆಯಷ್ಟೇ ಅಪ್ಪನಿಂದ ‘ಸೈಕಲ್’ನ್ನು ಕಿತ್ತುಕೊಳ್ಳಲು ಯಶಸ್ವಿಯಾದ ಅಖಿಲೇಶ್, ತಂದೆ ಮುಲಾಯಂ ಸಿಂಗ್ ಯಾದವ್’ರೊಂದಿಗೆ ಯಾವುದೇ ಭಿನಾಭಿಪ್ರಾಯವಿಲ್ಲವೆಂದೂ, ಮುಂದಿನ ಚುನಾವಣೆಯನ್ನು ಒಗಟ್ಟಾಗಿ ಎದುರಿಸುವುದಾಗಿ ಹೇಳಿದ್ದಾರೆ.
ತಂದೆಯೊಂದಿಗೆ ಯಾವುದೇ ಭಿನಾಭಿಪ್ರಾಯವಿಲ್ಲ, ಅವರೊಂದಿಗೆ ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿರುವ ಅಖಿಲೇಶ್, ಮುಂದಿನ ಬಾರಿಯೂ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ತಾನು ಹಾಗೂ ಮುಲಾಯಂ ಸಿಂಗ್ ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶೇ.90 ಅಭ್ಯರ್ಥಿಗಳು ಎರಡರಲ್ಲೂ ಇದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಚಿಹ್ನೆ ‘ಸೈಕಲ್’ನ್ನು ಅಖಿಲೇಶ್ ನೇತೃತ್ವದ ಬಣಕ್ಕೆ ನಿನ್ನೆ ಚುನಾವಣಾ ಆಯೋಗವು ನೀಡಿದೆ. ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್’ನೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.