ಪ್ರತ್ಯೇಕ ಲಿಂಗಾಯತ ಧರ್ಮ ವರದಿ ಅಂಗೀಕರಿಸಿದ ಸಿಎಂ

ಬೆಂಗಳೂರು: ಪ್ರತ್ಯೇಕ ಧರ್ಮ ಸ್ಥಾಪನೆಗೆ ವೀರಶೈವ ಪರ ಸಚಿವರ ವಿರೋಧ ವ್ಯಕ್ತವಾದ ನಡುವೆಯೂ, ಸಿಎಂ ಸಿದ್ದರಾಮಯ್ಯ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಸಂಪುಟದಲ್ಲಿ ಬಿಸಿ ಬಿಸಿ ಚರ್ಚೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ನ್ಯಾ.ನಾಗಮೋಹನ್ ದಾಸ್ ನೀಡಿರುವ ಶಿಫಾರಸ್ಸುಗಳನ್ನು ಅಂಗೀಕರಿಸಿದ್ದಾರೆ.

ಲಿಂಗಾಯತ/ ವೀರಶೈವ ಹಾಗೂ ಹೊಸ ತತ್ವ ಪಾಲಿಸುವ ಎಲ್ಲರಿಗೂ ಅನ್ವಯವಾಗುವಂತೆ ಪ್ರತ್ಯೇಕ ಧರ್ಮ ಎಂದು ಶಿಫಾರಸು ಮಾಡಲು ಸಂಪುಟ ನಿರ್ಧರಿಸಿದೆ, ಎನ್ನಲಾಗಿದೆ.

ಮುಖ್ಯಮಂತ್ರಿಗಳ ಅಧಿಕೃತ ಘೋಷಣೆ ಬಳಿಕವಷ್ಟೇ, ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

'ವೀರಶೈವ ಲಿಂಗಾಯತ ಎರಡನ್ನೂ ಸೇರಿಸಿ ಪ್ರತ್ಯೇಕ ಧರ್ಮ ರಚಿಸಲಿ. ಸಭೆಯಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಈ ಬಗ್ಗೆ ಮತ್ತೆ ಚರ್ಚೆ ಮಾಡೋಣ ಎಂದು ಸಿಎಂ ಹೇಳಿದ್ದಾರೆ . ಕಾನೂನು ತಜ್ಞರ ಅಭಿಪ್ರಾಯ ಪಡೆದು ಸಿಎಂ ನಿರ್ಧರಿಸುತ್ತಾರೆ. ಸಭೆಯಲ್ಲಿ ಯಾವುದೇ ರೀತಿಯ ಗದ್ದಲ ಆಗಿಲ್ಲ,' ಎಂದು ವಿಧಾಸೌಧದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.