ಪ್ರಧಾನಿ ನರೇಂದ್ರ ಮೋದಿ ಅವರು ಮೀಸೆಯ ಕೂದಲಿದ್ದಂತೆ. ರಾಹುಲ್ ಗಾಂಧಿ ಬಾಲದ ಕೂದಲಿದ್ದಂತೆ. ಇವರನ್ನು ಪರಸ್ಪರ ಹೋಲಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.
ಶಿವಪುರಿ: ಪ್ರಧಾನಿ ನರೇಂದ್ರ ಮೋದಿ ಅವರು ಮೀಸೆಯ ಕೂದಲಿದ್ದಂತೆ. ರಾಹುಲ್ ಗಾಂಧಿ ಬಾಲದ ಕೂದಲಿದ್ದಂತೆ. ಇವರನ್ನು ಪರಸ್ಪರ ಹೋಲಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.
ಈ ಕೀಳು ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಮಾತನಾಡಿದ ತೋಮರ್ ಈ ಹೇಳಿಕೆ ನೀಡಿ ದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಖರ್ಗೆ, ‘ಇಂಥ ಹೇಳಿಕೆ ಪ್ರಧಾನಿಗೂ ಅವಮಾನ ಮಾಡುವಂಥದ್ದು. ಇಂಥ ವರನ್ನು ಪ್ರಧಾನಿ ನಿಯಂತ್ರಿಸಬೇಕು’ ಎಂದಿದ್ದಾರೆ.
