ಬೆಂಗಳೂರಿನಲ್ಲಿ ಮತ ಎಣಿಕೆ ದಿನದಂದು ನೀರು ಪೂರೈಕೆಯಲ್ಲಿ ವ್ಯತ್ಯಯ

No Cauvery Water Supply On May 15 In Bengaluru
Highlights

ಕಾವೇರಿ ನೀರನ್ನು ಅವಲಂಬಿಸಿರುವ ಬೆಂಗಳೂರಿಗರೇ ಎಚ್ಚರ. ಮತ ಎಣಿಕೆ ದಿನ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.  ಮೇ 15ರ ಮಂಗಳವಾರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಅಂದು ಅರ್ಧದಷ್ಟು ಬೆಂಗಳೂರಿಗೆ ಅಂದು ಕಾವೇರಿ ನೀರು ಪೂರೈಕೆಯಾಗುವುದಿಲ್ಲ. 

ಬೆಂಗಳೂರು (13) :  ಕಾವೇರಿ ನೀರನ್ನು ಅವಲಂಬಿಸಿರುವ ಬೆಂಗಳೂರಿಗರೇ ಎಚ್ಚರ. ಮತ ಎಣಿಕೆ ದಿನ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.  

ಮೇ 15ರ ಮಂಗಳವಾರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಅಂದು ಅರ್ಧದಷ್ಟು ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುವುದಿಲ್ಲ. ಟಿ ಕೆ ಹಳ್ಳಿ, ಹಾರೋಹಳ್ಳಿ, ಮತ್ತು ತಾತಗುಣಿಯಲ್ಲಿ ಯಂತ್ರಾಗಾರಗಳ ಉನ್ನತೀಕರಣ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಸ್ಥಗಿತ ಮಾಡಲಾಗುತ್ತಿದೆ.  

ಮೇ 15 ರಂದು ಬೆಳಗ್ಗೆ 8 ರಿಂದ 4 ಗಂಟೆಯವರೆಗೂ ಕೂಡ ನೀರು ಪುರೈಕೆಯಲ್ಲಿ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಬೆಂಗಳೂರಿನ ನಾಗರಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು, ಇದಕ್ಕೆ ಸಹಕರಿಸುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ. 

ಪ್ರಮುಖವಾಗಿ ಅಂದು ನೀರು ಪೂರೈಕೆಯಾಗದ ಪ್ರಮುಖ ಕ್ಷೇತ್ರಗಳೆಂದರೆ ಜಯನಗರ, ಜೆ ಪಿ ನಗರ ಬಸವನಗುಡಿ, ಕೆ ಎಸ್ ಲೇಔಟ್, ಬನಶಂಕರಿ, ದೊಮ್ಮಲೂರು, ಬಿಟಿಎಂಲೇಔಟ್, ಇಂದಿರಾ ನಗರ, ಶಾಂತಿನಗರ , ಕೋರಮಂಗಲ, ವಿಜಯನಗರ, ಮತ್ತಿಕೆರೆ, ಮಲ್ಲೇಶ್ವರಂ, ಆರ್ ಟಿ ನಗರ ಮಡಿವಾಳ, ಯಲಚೇನಹಳ್ಳಿ, ಕಸ್ತೂರಿ ಬಾ ರಸ್ತೆ, ಮೆಜೆಸ್ಟಿಕ್, ಸದಾಶಿವನಗರ, ಸೇರಿದಂತೆ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

loader