ನಂತರದ ದಿನಗಳಲ್ಲಿ ಜನ ತಮ್ಮ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಮತ್ತು ನೋಟುಗಳನ್ನು ಪಡೆಯಲು ದಿನಗಟ್ಟಲೆ ಬ್ಯಾಂಕ್‌ಗಳ ಮುಂದೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಹೀಗೆ ನೋಟಿಗಾಗಿ ಸರದಿಯಲ್ಲಿ ನಿಂತು ಸಾವನ್ನಪ್ಪಿದವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿತ್ತು. ಪರಿಣಾಮ ಸರ್ಕಾರ ಭಾರೀ ಟೀಕೆಯನ್ನೇ ಎದುರಿಸಬೇಕಾಗಿ ಬಂದಿತ್ತು.
ನಂತರದ ದಿನಗಳಲ್ಲಿ ಜನ ತಮ್ಮ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಮತ್ತು ನೋಟುಗಳನ್ನು ಪಡೆಯಲು ದಿನಗಟ್ಟಲೆ ಬ್ಯಾಂಕ್ಗಳ ಮುಂದೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಹೀಗೆ ನೋಟಿಗಾಗಿ ಸರದಿಯಲ್ಲಿ ನಿಂತು ಸಾವನ್ನಪ್ಪಿದವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿತ್ತು. ಪರಿಣಾಮ ಸರ್ಕಾರ ಭಾರೀ ಟೀಕೆಯನ್ನೇ ಎದುರಿಸಬೇಕಾಗಿ ಬಂದಿತ್ತು.
2 ತಿಂಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸರ್ಕಾರವೇನೂ ಭರವಸೆ ನೀಡಿತ್ತು. ಕ್ರಮವಾಗಿ ಮಾರುಕಟ್ಟೆಯಲ್ಲಿ ನೋಟುಗಳ ಚಲಾವಣೆ ಸರಾಗವಾದರೂ, ಎಟಿಎಂಗಳಲ್ಲಿ ಮಾತ್ರ ಈಗಲೂ ಹಣ ಇಲ್ಲ ಎಂಬ ಬೋರ್ಡ್ ಸಾಮಾನ್ಯವಾಗಿದೆ. ಮೂಲಗಳ ಪ್ರಕಾರ ಅಪನಗದೀಕರಣ ವೇಳೆ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿದ್ದ ನೋಟುಗಳ ಪೈಕಿ ಶೇ.60ರಷ್ಟನ್ನು ಮಾತ್ರವೇ ಇದುವರೆಗೆ ಮರುಪೂರೈಕೆ ಮಾಡಲಾಗಿದೆ.
