ಅತ್ಯಂತ ಕಡಿಮೆ ದರದಲ್ಲಿ ಆನ್ ಲೈನ್ ನಲ್ಲಿ ಭರ್ಜರಿ ಶಾಪಿಂಗ್ ಮಾಡುವವರಿಗೆ ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್. ಇನ್ನು ಭಾರೀ ಡಿಸ್ಕೌಂಟ್ ನಲ್ಲಿ ವಸ್ತು ಪಡೆಯುವುದಕ್ಕೆ ಕೇಂದ್ರ ಸರ್ಕಾರ  ಬ್ರೇಕ್ ಹಾಕಲಿದೆ.  

ನವದೆಹಲಿ: ರಸ್ತೆ ಬದಿಯ ಅಂಗಡಿಗಳಿಗಿಂತ ಬೆಲೆ ಕಡಿಮೆ ಇದೆ ಎಂದು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ವಸ್ತುಗಳನ್ನು ಖರೀದಿ ಸುವವರಿಗೆ ಕೇಂದ್ರ ಸರ್ಕಾರ ಶಾಕ್ ಕೊಡಲು ಮುಂದಾಗಿದೆ. ಆನ್‌ಲೈನ್ ಶಾಪಿಂಗ್ ತಾಣಗಳು ಭಾರಿ ಪ್ರಮಾ ಣದ ಡಿಸ್ಕೌಂಟ್ ನೀಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿ ನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. 

ಆನ್‌ಲೈನ್ ಶಾಪಿಂಗ್ ತಾಣದ ಯಾವುದೇ ಸಮೂಹ ಕಂಪನಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಲೆ ಅಥವಾ ವಸ್ತುಗಳ ಮಾರಾಟ ಹಾಗೂ ಸೇವೆಯ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಎಂದು ಕೇಂದ್ರ ಸರ್ಕಾರ ರೂಪಿಸಲು ಉದ್ದೇಶಿಸಿರುವ ಇ-ಕಾಮರ್ಸ್ ನೀತಿಯ ಆರಂಭಿಕ ಕರಡಲ್ಲಿ ಅಂಶವಿದೆ.