ಉದ್ಯಮಿಗಳನ್ನು ಅಪಹರಿಸಿ ಕೋಟ್ಯಾಂತರ ರೂಪಾಯಿ ಸುಲಿಗೆ ಆರೋಪ ಎದುರಿಸುತ್ತಿರುವ ರೌಡಿ ನಾಗ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸಶೆನ್ಸ್ ಕೋರ್ಟ್​ನಲ್ಲಿ ನಾಗ ಆರೋಪಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಮನೆಯಲ್ಲಿ ಸಿಕ್ಕ 15 ಕೋಟಿ ಹಳೆ ನೋಟುಗಳ ಮೂಲ ಮಾತ್ರ ಇನ್ನೂ ನಿಗೂಢವಾಗಿರುವುದರಿಂದ ನಾಗ ವಿಚಾರಣೆ ಅಗತ್ಯವಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಸರ್ಕಾರಿ ಪರ ವಕೀಲರ ವಾದ ಪರಿಗಣಿಸಿದ ಕೋರ್ಟ್​​​ ಅರ್ಜಿ ವಜಾಗೊಳಿಸಿದೆ.

ಬೆಂಗಳೂರು(ಮೇ.05): ಬ್ಲಾಕ್​ ಅಂಡ್​ ವೈಟ್​​ ದಂಧೆಯಲ್ಲಿ ಭಾಗಿಯಾಗಿ ಪೊಲೀಸರಿಂದ ತಲೆತ್ಪಪಿಸಿಕೊಂಡು ತಿರುಗುತ್ತಿರುವ ರೌಡಿಶೀಟರ್ ನಾಗನ ನಿರೀಕ್ಷಣಾ ಜಾಮೀನು ಆರ್ಜಿ ವಜಾಗೊಂಡಿದೆ. ಮತ್ತೊಂದೆಡೆ ಖಾಕಿ ಬಲೆಗೆ ಬಿದ್ದ ನಾಗ ಬಂಟರು ಆತನ ಎಲ್ಲಾ ಕುಕೃತ್ಯಗಳನ್ನು ಎಳೆಎಳೆಯಾಗಿ ಬಿಚ್ಚಿದ್ದಾರೆ. ಇಂದು ನಾಗನ ಪಾಲಿಗೆ ಅಕ್ಷರಶಃ ಅಶುಭ ಶುಕ್ರವಾರ.

ಉದ್ಯಮಿಗಳನ್ನು ಅಪಹರಿಸಿ ಕೋಟ್ಯಾಂತರ ರೂಪಾಯಿ ಸುಲಿಗೆ ಆರೋಪ ಎದುರಿಸುತ್ತಿರುವ ರೌಡಿ ನಾಗ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸಶೆನ್ಸ್ ಕೋರ್ಟ್​ನಲ್ಲಿ ನಾಗ ಆರೋಪಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಮನೆಯಲ್ಲಿ ಸಿಕ್ಕ 15 ಕೋಟಿ ಹಳೆ ನೋಟುಗಳ ಮೂಲ ಮಾತ್ರ ಇನ್ನೂ ನಿಗೂಢವಾಗಿರುವುದರಿಂದ ನಾಗ ವಿಚಾರಣೆ ಅಗತ್ಯವಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಸರ್ಕಾರಿ ಪರ ವಕೀಲರ ವಾದ ಪರಿಗಣಿಸಿದ ಕೋರ್ಟ್​​​ ಅರ್ಜಿ ವಜಾಗೊಳಿಸಿದೆ.

ನಾಗನ ಪ್ರಕರಣ ತೀವ್ರಗೊಳಿಸಿರುವ ಎಸಿಪಿ ರವಿಕುಮಾರ್​​, ನಾಗನ ಬಲಗೈ ಬಂಟರಾದ ಸರವಣ, ಶ್ರೀನಿವಾಸ ಹಾಗೂ ಬೌನ್ಸರ್​ ಜೈಕೃಷ್ಣನ್​​​ ರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನಾಗ ಮಾಡುತ್ತಿದ್ದ ಬ್ಲಾಕ್​ ಅಂಡ್​ ವೈಟ್​ ದಂದೆಯ ಇಂಚಿಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ತನಿಖೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಉದ್ಯಮಿಗಳಿಗೆ ಗನ್​ ತೋರಿಸಿ ಬೆದರಿಸುತ್ತಿದ್ದ ನಾಗ ಮತ್ತವನ ಮಕ್ಕಳು ಸುಲಿಗೆ ಮಾಡುತ್ತಿದ್ದರು. ಅಲ್ಲದೆ, ನಾಗ ಮಾಡಿಸಿದ್ದ ಪ್ರತಿಯೊಂದು ಅಪಹರಣ ಸುಳಿವು ನೀಡಿದ್ದಾರೆ. ಬಂಧಿತರನ್ನು ಕೋರ್ಟ್​​ ಮುಂದೆ ಹಾಜರು ಪಡಿಸಿದ ಪೊಲೀಸರು ಮೇ.12ರವರೆಗೆ ತಮ್ಮ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ನಾಗರಾಜ್​​​ ಮತ್ತವನ ಮಕ್ಕಳಾದ ಗಾಂಧಿ, ಶಾಸ್ತ್ರಿ ಹಾಗೂ ಮೂವರು ಬೌನ್ಸರ್​ಗಳು ಉದ್ಯಮಿಗಳನ್ನು ಕರೆದಂತೆ ಹಲ್ಲೆ ನಡೆಸುತ್ತಿದ್ದರು. ಗನ್​​ ತೋರಿಸಿ ಅವರ ಬಳಿಯಿದ್ದ ಹಣ ಕಿತ್ತುಕೊಂಡು ಪೊಲೀಸರಿಗೆ ದೂರು ನೀಡದಂತೆ ಹೆದರಿಸಿ ಕಳುಹಿಸುತ್ತಿದ್ದರು ಎಂಬ ಬಗ್ಗೆ ಬಂಧಿತರು ಬಾಯ್ಬಿಟ್ಟಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದಿದೆ.

ನಾಗನ ಪ್ರಕರಣ ತನಿಖೆಯ ಹೊಣೆಯನ್ನು ಎಸಿಪಿ ರವಿಕುಮಾರ್​ ಹೊಣೆ ನೀಡಿದ ಮೇಲೆ ತನಿಖೆ ವೇಗಗೊಂಡಿದೆ. ನಾಗ ಬಲಗೈಬಂಟರನ್ನು ಬಂಧಿಸಿರುವ ವಿಶೇಷ ತಂಡ ನಾಗ ಸೆರೆಯಿಡಿಯುವ ವಿಶ್ವಾಸದಲ್ಲಿದೆ.