ಹೈದರಾಬಾದ್: ತೆಲಂಗಾಣದಲ್ಲಿ ಟಿಆರ್‌ಎಸ್   ಜೊತೆ ಹೊಂದಾಣಿಕೆಯಿಲ್ಲ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ಅಮಿತ್ ಶಾ ಹೇಳಿದ್ದಾರೆ.

ಮೆಹಬೂಬ್ ನಗರ ದಲ್ಲಿ ಸಾರ್ವಜನಿಕ ರ‌್ಯಾಲಿಯೊಂದರಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾ ಪತ್ರಕರ್ತರ ಜೊತೆ ಮಾತನಾ ಡುತ್ತಾ ಈ ವಿಷಯ ತಿಳಿಸಿದರು. ‘ಟಿಆರ್‌ಎಸ್ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳು ತ್ತಿಲ್ಲ,’ ಎಂದರು ಶಾ. 

ಏಕಕಾಲದ ಚುನಾವ ಣೆಗೆ ಟಿಆರ್  ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ಸಹಮತವಿದ್ದರು. ಆದರೆ, ಆ ನಂತರ ತಮ್ಮ ನಿಲುವು ಬದಲಾಯಿಸಿದ್ದಾರೆ. ಚುನಾ ವಣೆ 9 ತಿಂಗಳು ಮುಂಚಿತ ಮಾಡುವುದಕ್ಕೆ ಕಾರಣವೇನು? ಎಂದು ಅವರು ಪ್ರಶ್ನಿಸಿದರು.