ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಶಾಲೆಯಲ್ಲಿ ಶಿಕ್ಷಕರ ಹುದ್ದೆಗೂ ಅರ್ಜಿ ಸಲ್ಲಿಸಬಾರದು ಎಂಬ ನಿಯಮವೂ ಈ ಶಾಲೆಯಲ್ಲಿದೆ.

ನವದೆಹಲಿ (ಜ.16): ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರ ಮಕ್ಕಳಿಗೆ ಪ್ರವೇಶ ನೀಡುವುದಿಲ್ಲ ಎಂದು ಪಶ್ಚಿಮ ದೆಹಲಿಯ ಸಾಲ್ವಾನ್‌ ಶಾಲೆ ಷರತ್ತು ವಿಧಿಸಿದೆ.

ಕಡಿಮೆ ಮಕ್ಕಳನ್ನು ಹೊಂದಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಲೆ ಪ್ರವೇಶ ಅರ್ಜಿಯಲ್ಲಿ ಈ ರೀತಿಯ ಷರತ್ತನ್ನು ಪ್ರಕಟಿಸಿದೆ.

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಶಾಲೆಯಲ್ಲಿ ಶಿಕ್ಷಕರ ಹುದ್ದೆಗೂ ಅರ್ಜಿ ಸಲ್ಲಿಸಬಾರದು ಎಂಬ ನಿಯಮವೂ ಈ ಶಾಲೆಯಲ್ಲಿದೆ.

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ರೀತಿಯ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಸಾಲ್ವಾನ್‌ ಸಮೂಹದ ಅಧ್ಯಕ್ಷ ಸುಶೀಲ್‌ ಸಾಲ್ವಾನ್‌ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)