ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಾಸಲೀಲೆ ಸಿಡಿಯಲ್ಲಿದ್ದ ಸ್ವಾಮೀಜಿ ಬಂಡವಾಳ ಬಯಲಾಗಿದೆ. ಸುವರ್ಣ ನ್ಯೂಸ್ನಲ್ಲಿ Super Exclusive ಮಾಹಿತಿ ಇದೆ. ರಾಸಲೀಲೆ ಸಿಡಿಯಲ್ಲಿ ಇರೋದು ನಿತ್ಯಾನಂದ ಅನ್ನೋದು ಸಾಬೀತಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸ್ಪೋಟಕ ಸತ್ಯ ಬಹಿರಂಗವಾಗಿದೆ.
ಬೆಂಗಳೂರು (ನ.22): ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಾಸಲೀಲೆ ಸಿಡಿಯಲ್ಲಿದ್ದ ಸ್ವಾಮೀಜಿ ಬಂಡವಾಳ ಬಯಲಾಗಿದೆ. ಸುವರ್ಣ ನ್ಯೂಸ್ನಲ್ಲಿ Super Exclusive ಮಾಹಿತಿ ಇದೆ. ರಾಸಲೀಲೆ ಸಿಡಿಯಲ್ಲಿ ಇರೋದು ನಿತ್ಯಾನಂದ ಅನ್ನೋದು ಸಾಬೀತಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸ್ಪೋಟಕ ಸತ್ಯ ಬಹಿರಂಗವಾಗಿದೆ.
ಚಿತ್ರನಟಿಯೊಬ್ಬರ ಜೊತೆ ರಾಸಲೀಲೆ ನಡೆಸಿದ್ದ ನಿತ್ಯಾನಂದ ರಾಸಲೀಲೆ ವಿಡೀಯೋದಲ್ಲಿ ಇರೋದು ನಾನಲ್ಲ ಎಂದು ವಾದಿಸಿದ್ದ. ಗ್ರಾಫಿಕ್ಸ್ ಮೂಲಕ ನನ್ನ ಚಾರಿತ್ಯವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ. ತಜ್ಞರ ಅಭಿಪ್ರಾಯಕ್ಕಾಗಿ ಸಿಐಡಿ ತಂಡ ದೆಹಲಿ ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿತ್ತು. ವೀಡಿಯೋ ಪರೀಕ್ಷಿಸಿ ತನಿಖೆ ನೀಡಿರುವ ದೆಹಲಿ ವಿಧಿವಿಜ್ಞಾನ ಇಲಾಖೆ ವಿಡಿಯೋದಲ್ಲಿ ಇರುವುದು ನಿತ್ಯಾನಂದ ಸ್ವಾಮಿಯೇ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ನಿತ್ಯಾ ರಾಸಲೀಲೆ ಸಂಬಂಧ ನೂರಾರು ಸಾಕ್ಷಿ ಕಲೆ ಹಾಕಿದ್ದ ಸಿಐಡಿ ತಂಡ ಅಂದಿನ ಸಿಐಡಿ ಡಿಐಜಿ ಚರಣ್ ರೆಡ್ಡಿ ದೆಹಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆ ನಡೆಸಿದ ಎಫ್'ಎಸ್ಎಲ್ ದೃಢಪಡಿಸಿದೆ.
